ಇಂದು ಸಂಜೆ ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ: ‘ಲಿವರ್‌ ಮತ್ತು ಬೊಜ್ಜು’ ಕುರಿತು ಚರ್ಚೆ.

ಮೈಸೂರು,ಜುಲೈ,2,2021(www.justkannada.in): ವಿಜ್ಞಾನ ಪ್ರಸಾರ್‌, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ವತಿಯಿಂದ ಸ್ವಾಮಿ ವಿವೇಕಾನಂದ ಯೂಥ್‌ ಮೂವ್ ಮೆಂಟ್‌, ಮೈಸೂರು ನೆರವಿನಲ್ಲಿ  ಲಿವರ್‌ ಮತ್ತು ಬೊಜ್ಜು ಕುರಿತು ಇಂದು ಸಂಜೆ ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ ಆಯೋಜನೆ ಮಾಡಲಾಗಿದೆ. jk

ಇಂದು ಸಂಜೆ 7 ಗಂಟೆಗೆ ಜೂಮ್ ಜಾಲತಾಣದಲ್ಲಿ  ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ ಆಯೋಜನೆ ಮಾಡಲಾಗಿದ್ದು, ಈ  ವೇಳೆ ಬೊಜ್ಜು ಮತ್ತು ಯಕೃತ್ತು ಎನ್ನುವ ಅಂಗಗಳಿಗೆ ಇರುವ ಅವಿನಾಭಾವ ಸಂಬಂಧವೇನು?  ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ನಮ್ಮ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆ ಆಗುವುದೇಕೆ? ಇದಕ್ಕೂ ಯಕೃತ್ತು ಅಥವಾ ಲಿವರ್‌ ಎನ್ನುವ ಅಂಗಕ್ಕೂ ಸಂಬಂಧವೇನು? ಲಿವರಿನಲ್ಲಿ ನಡೆಯುವ ಯಾವ ಕ್ರಿಯೆಗಳು ಇದನ್ನು ಉತ್ತೇಜಿಸುತ್ತವೆ? ಇದನ್ನು ತಡೆಯುವ ಮಾರ್ಗವಿದೆಯೇ? ಈ ಬಗ್ಗೆ ಹದಿನೈದು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿರುವ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಜೀವರಸಾಯನಿಕ ವಿಭಾಗದ ಸಹಾಯಕ ಪ್ರೊಫೆಸರ್ ಆಗಿರುವ ಡಾ. ದಿವ್ಯಾ ಪಿ. ಕುಮಾರ್‌ ಅವರು ಜಾಲಗೋಷ್ಠಿಯಲ್ಲಿ ಚರ್ಚೆಯಲ್ಲಿ  ಭಾಗವಹಿಸಲಿದ್ದಾರೆ.

ಜೂಮ್‌  ಜಾಲತಾಣದಲ್ಲಿ. https://bit.ly/3tl8aWn ID: 838 3460 8715  ಪಾಸ್‌ ವರ್ಡ್‌ : 941968  ಈ ಮೂಲಕ ಚರ್ಚೆಯನ್ನ ವೀಕ್ಷಿಸಬಹುದು.  ನಿಮ್ಮ ಪ್ರಶ್ನೆಗಳನ್ನು ಮುಂದಾಗಿಯೇ ಕಳಿಸುವುದಾದರೆ, kutuhalikannada@gmail.com ವಿಳಾಸಕ್ಕೆ ಇಮೇಲ್‌ ಮಾಡಬಹುದು.

Key words: today-interesting Kannada -Science –webinar-Talk –about- lever and obesity.