ಸಿದ್ದರಾಮಯ್ಯ ಅವರು ಯಾವುದೇ ಪಾಪ ಮಾಡಿಲ್ಲ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ- ಯತೀಂದ್ರ ಸಿದ್ಧರಾಮಯ್ಯ.

ಮೈಸೂರು,ಜುಲೈ,2,2021(www.justkannada.in): ಪಾಪದ ಕೊಡ ತುಂಬುತ್ತದೆ ಹೇಳಿಕೆಗೆ  ತಿರುಗೇಟು ನೀಡಿರುವ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರು ಯಾವುದೇ ಪಾಪ ಮಾಡಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.jk

ಮೈಸೂರಿನ ವರುಣ ಕ್ಷೇತ್ರದ ಸೋಮೇಶ್ವರಪುರ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ,  ಸಿದ್ದರಾಮಯ್ಯ ತಾವಾಗಿ ಜೆಡಿಎಸ್ ಪಕ್ಷ ಬಿಡಲಿಲ್ಲ. ಜೆಡಿಎಸ್‌ನಲ್ಲಿ ಬೆಳೆಯುತ್ತಿದ್ದ ನಾಯಕರನ್ನು ಮೊಟಕುಗೊಳಿಸಲು ಉಚ್ಚಾಟನೆ ಮಾಡಲಾಯ್ತು. ಜೆಡಿಎಸ್‌ನಿಂದ ಹೊರಬಂದ ಮೇಲೆ ಸಿದ್ದರಾಮಯ್ಯ ಅವರಿಗೆ ತುಂಬಾ ಒಳ್ಳೆಯದೇ ಆಗಿದೆ ಈಗಲೂ ಒಳ್ಳೆಯದೇ ಆಗುತ್ತಿದೆ ಎಂದರು.

ಅಲ್ಲದೆ ಜೆಡಿಎಸ್ ಪಕ್ಷ ತನ್ನ ನೆಲೆ ಕಳೆದುಕೊಳ್ಳಲಿದೆ ಎಂದು  ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.

Key words: Congress – back –power-siddaramaiah-MLA-Yatindra Siddaramaiah