ಸ್ಯಾಂಡ್ಸ್ ವಿಂಬಲ್ಡನ್ ಚಾಂಪಿಯನ್ಶಿಪ್: ಡಬಲ್ಸ್’ನಲ್ಲಿ 2ನೇ ಸುತ್ತಿಗೆ ಸಾನಿಯಾ

ಬೆಂಗಳೂರು ಜುಲೈ 02, 2021 (www.justkannada.in): ಸಾನಿಯಾ ಮಿರ್ಜಾ ಮತ್ತು ಬೆಥನಿ ಮ್ಯಾಟೆಕ್- ಸ್ಯಾಂಡ್ಸ್ ವಿಂಬಲ್ಡನ್ ಚಾಂಪಿಯನ್‌ಶಿಪ್‌ ಡಬಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಆರಂಭಿಕ ಸುತ್ತಿನಲ್ಲಿ ಸಾನಿಯಾ ಮಿರ್ಝಾ-ಬೆಥನಿ ಮ್ಯಾಟೆಕ್-ಸ್ಯಾಂಡ್ಸ್ ಜೋಡಿ ಆರನೇ ಶ್ರೇಯಾಂಕಿತ ದೇಸಿರೆ ಕ್ರಾವ್ಜಿಕ್ (ಅಮೆರಿಕಾ)-ಅಲೆಕ್ಸಾ ಗೌರಾಚ್ (ಚಿಲಿ) ಜೋಡಿಯನ್ನು 7-5, 6-3ರ ಅಂತರದಿಂದ ಸೋಲಿಸಿದೆ.

34ರ ಹರೆಯದ ಸಾನಿಯಾ ಮಿರ್ಝಾ ತನ್ನ ವೃತ್ತಿ ಜೀವನದಲ್ಲಿ 6 ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದಿದ್ದಾರೆ. 2013ರಲ್ಲಿ ಮಿರ್ಝಾ ಸಿಂಗಲ್ಸ್‌ಗೆ ನಿವೃತ್ತಿ ಘೋಷಿಸಿದ್ದರು.