ಕಾವೇರಿ ನದಿ ವಿಚಾರವಾಗಿ ನನ್ನ ಸಲಹೆ ಸಹಕಾರ ಇರುತ್ತೆ: ಸರ್ಕಾರ ಕಾನೂನು ಹೋರಾಟ ಮಾಡಲಿ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.

ನವದೆಹಲಿ,ಸೆಪ್ಟಂಬರ್,22,2023(www.justkannada.in): ಕಾವೇರಿ ನದಿ ವಿಚಾರವಾಗಿ ನನ್ನ ಸಲಹೆ ಸಹಕಾರ ಇರುತ್ತದೆ.  ಸರ್ಕಾರ ಕಾನೂನು ಹೋರಾಟ ಮಾಡಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಸರ್ಕಾರ ಮೊದಲೇ ತಮಿಳುನಾಡಿಗೆ ನೀರು ಬಿಟ್ಟು ಯಡವಟ್ಟು ಮಾಡಿಕೊಂಡಿದೆ. ಕಾವೇರಿ ನೀರು ಹರಿಸಿ ತಪ್ಪು ಮಾಡಿದೆ. ಕಾವೇರಿ ನದಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದೇನೆ. ಸುಪ್ರೀಂಕೋರ್ಟ್ ಆದೇಶಕ್ಕೆ ನಾನು ಪ್ರತಿಕ್ರಿಯಿಸಲ್ಲ. ನೀರು ಬಿಟ್ಟಿದ್ದು ತಪ್ಪು ಅಂತಾ ಪಕ್ಷದ ಪರ ಕುಮಾರಸ್ವಾಮಿ ಹೇಳಿದ್ದಾರೆ.  ಕಾವೇರಿ ವಿಚಾರದ ಬಗ್ಗೆ ಪಕ್ಷದ ಪರ ಹೆಚ್ ಡಿಕೆ ಮಾತನಾಡುತ್ತಾರೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ  ವಿಚಾರದ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಹೆಚ್ ಡಿ ದೇವೇಗೌಡರು ತಿಳಿಸಿದರು.

Key words: advice – Cauvery issue – cooperation- Former PM-HD Deve Gowda