ಸಂಪುಟದಲ್ಲಿ ಅವರಿಗೂ ಖಂಡಿತ  ಅವಕಾಶ ಸಿಗುತ್ತೆ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್…

Promotion

ಬೆಂಗಳೂರು,ಜೂ,7,2019(www.justkannada.in): ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರನ್ನ ಕಡೆಗಣಿಸಿಲ್ಲ. ರಾಮಲಿಂಗರೆಡ್ಡಿ ಅವರಿಗೆ ಸಚಿವ ಸಂಪುಟ ಪುನರಚನೆ ವೇಳೆ ಖಂಡಿತ ಅವಕಾಶ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ರಾಮಲಿಂಗರೆಡ್ಡಿ ನಮ್ಮ  ಸಂಯೋಜಕ ಸಮಿತಿ ಅಧ್ಯಕ್ಷರು.  ರಾಮಲಿಂಗರೆಡ್ಡಿ, ಮುನಿಯಪ್ಪ ಸೇರಿ ಹಲವು ನಾಯಕರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ.ಅವರಲ್ಲರೂ ಕಾಂಗ್ರೆಸ್ ನಲ್ಲಿ ಶಿಸ್ತಿನಿಂದಿದ್ದಾರೆ.  ಹೀಗಾಗಿ ಅವಕಾಶ ಖಂಡಿತ ಸಿಗುತ್ತದೆ ಎಂದು ಹೇಳಿದರು.

ಹಾಗೆಯೇ ಸಂಪುಟ ವಿಸ್ತರಣೆಯಾಗುತ್ತದೆಯೋ ಅಥವಾ ಪುನರಚನೆಯಾಗುತ್ತದೆಯೋ ಗೊತ್ತಿಲ್ಲ.  ಸಂಪುಟ ವಿಸ್ತರಣೆಯಾದರೇ ಇಬ್ಬರಿಗೆ ಮಾತ್ರ ಅವಕಾಶ ಸಿಗುತ್ತದೆ. ಸಂಪುಟ ಪುನರಚನೆಯಾದರೇ ಹಲವರಿಗೆ ಅವಕಾಶ ಸಿಗಲಿದೆ ಎಂದರು.

ಇನ್ನು ಮೈತ್ರಿಯಿಂದ ಕಾಂಗ್ರೆಸ್ ಗೆ ಹಿನ್ನಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಮುಂದೆ ಏನಾಗಬೇಕು ಎಂಬುದರ ಬಗ್ಗೆ ಚಿಂತಿಸುತ್ತೇನೆ.ಹಿಂದೆ ಆಗಿರುವುದರ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.

Key words: They will also have the opportunity in the cabinet- KPCC president Dinesh Gundurao.

#Bangalore #DineshGundurao #cabinet #opportunity