ಸ್ಯಾಂಡಲ್ ವುಡ್ ನಟ ಧೃವ ಸರ್ಜಾ ಮತ್ತು ಅವರ ಪತ್ನಿಗೆ ಕೊರೋನಾ ಸೋಂಕು ದೃಢ…

ಬೆಂಗಳೂರು,ಜು,15,2020(www.justkannada.in):  ಇತ್ತೀಚೆಗಷ್ಟೆ ಅಣ್ಣನನ್ನ ಕಳೆದುಕೊಂಡು ದುಃಖದಲ್ಲಿದ್ದ ಸ್ಯಾಂಡಲ್ ವುಡ್ ನಟ ದೃವ ಸರ್ಜಾ ಅವರಿಗೆ ಇದೀಗ ಮತ್ತೊಂದು  ಶಾಕಿಂಗ್ ನ್ಯೂಸ್ ಸಿಕ್ಕಿದೆ. ನಟ ಧೃವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.sandalwood-actor-dhruva-sarja-his-wife-corona-infection

ಈ ಕುರಿತು ಸ್ವತಃ ನಟ ದೃವಸರ್ಜಾ ಅವರೇ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ‘ನನ್ನ ಹೆಂಡತಿ ಮತ್ತು ನಾನು ಕೋವಿಡ್​19 ಪರೀಕ್ಷೆ ಮಾಡಿಸಿಕೊಂಡಿದ್ದೇವೆ.  ಈ ವೇಳೆ ನನಗೆ ಮತ್ತು ನನ್ನ ಪತ್ನಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಈಗ ನಾವಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವಿಬ್ಬರೂ ಶೀಘ್ರ ಗುಣಮುಖರಾಗಿ ನಿಮ್ಮ ಮುಂದೆ ಬರುತ್ತೇವೆ ಎಂದು ಧೃವಸರ್ಜಾ ತಿಳಿಸಿದ್ದಾರೆ.sandalwood-actor-dhruva-sarja-his-wife-corona-infection

ಹಾಗೆಯೇ  ‘ನಮ್ಮ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರೆಲ್ಲರೂ ದಯವಿಟ್ಟು ಕೋವಿಡ್​ ಪರೀಕ್ಷೆ ಮಾಡಿಸಿ  ಎಂದು ನಟ ದೃವಸರ್ಜಾ ಮನವಿ ಮಾಡಿದ್ದಾರೆ.

Key words: Sandalwood actor- Dhruva Sarja -his wife – corona- infection.