ದೇವಾಲಯ ತೆರವು ವಿವಾದ: ಸರ್ಕಾರದ ಜತೆ ಚರ್ಚಿಸಿ ತೀರ್ಮಾನ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.

ಬೆಂಗಳೂರು,ಸೆಪ್ಟಂಬರ್,13,2021(www.justkannada.in):  ನಂಜನಗೂಡಿನಲ್ಲಿ ಏಕಾಏಕಿ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸುಪ್ರೀಂಕೋರ್ಟ್ ಆದೇಶ ಪಾಲಿಸುವ ಜವಾಬ್ದಾರಿ ಇದೆ. ಸರ್ಕಾರದ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.

ಈ ಕುರಿತು ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸುಪ್ರೀಂ ಆದೇಶ ಪಾಲಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹೀಗಾಗಿ ಆದೇಶವನ್ನ ಪಾಲಿಸಬೇಕು. ದೇವಾಲಯಗಳನ್ನೂ ಉಳಿಸಬೇಕು. ಈ ಬಗ್ಗೆ ಸರ್ಕಾರದ ಜತೆ ಸಮಾಲೋಚನೆ ಮಾಡಿ ತೀರ್ಮಾನಿಸಲಾಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರವಿದಿದ್ರೆ ಎತ್ತುಗಳು ಕಸಾಯಿಖಾನೆಗಳಿಗೆ ಹೋಗುತ್ತಿದ್ದವು- ಎತ್ತಿನಗಾಡಿ ಚಲೋಗೆ ನಳೀನ್ ಕುಮಾರ್ ಕಟೀಲ್ ವ್ಯಂಗ್ಯ.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಎತ್ತಿನಗಾಡಿ ಚಲೋ ನಡೆಸಿದ ಬಗ್ಗೆ ವ್ಯಂಗ್ಯವಾಡಿದ ನಳೀನ್ ಕುಮಾರ್ ಕಟೀಲ್, ಬಿಜೆಪಿ ಸರ್ಕಾರ ಇರುವುದಕ್ಕೆ ಎತ್ತುಗಳು ಉಳಿದಿವೆ. ಆ ಎತ್ತುಗಳನ್ನ ಬಳಸಿಕೊಂಡು ಎತ್ತಿನಗಾಡಿಯಲ್ಲಿ ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರವಿದಿದ್ರೆ ಎತ್ತುಗಳು ಕಸಾಯಿಖಾನೆಗಳಿಗೆ ಹೋಗುತ್ತಿದ್ದವು ಎಂದು ಲೇವಡಿ ಮಾಡಿದರು.

Key words: Temple –clearance- controversy – government-discussion- nalin kumar katil