ಆ್ಯಂಬುಲೆನ್ಸ್ ನಲ್ಲೆ ಮಗುವಿಗೆ ಜನ್ಮ ನೀಡಿದ ಕೊರೋನ ಸೋಂಕಿತ ಮಹಿಳೆ…

ಮೈಸೂರು,ಮೇ,10,2021(www.justkannada.in): ಆ್ಯಂಬುಲೆನ್ಸ್  ನಲ್ಲೇ ಕೊರೋನಾ ಸೋಂಕಿತ ಮಹಿಳೆ ಮಗುವಿಗೆ ಜನ್ಮ ನೀಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.jk

ಟಿ. ನರಸೀಪುರ ತಾಲೂಕಿನ ಚಿಕ್ಕಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ.  ನರಸೀಪುರ ತಾಲೂಕಿನ ತಲಕಾಡು ಗ್ರಾಮದ ಸವಿತಾ (26) ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ. ಮಹಿಳೆಗೆ ಕೊರೋನ ಪಾಸಿಟಿವ್  ಇದ್ದ ಹಿನ್ನಲೆ, ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯಲು 108 ಆಂಬುಲೆನ್ಸ್ ಸಿಬ್ಬಂದಿ ಹಿಂದೇಟು ಹಾಕಿದರು. ಬಳಿಕ ಅಧಿಕಾರಿಗಳ ಆದೇಶದ ಮೇರೆಗೆ ಸೋಂಕಿತ ಮಹಿಳೆಯನ್ನ ಮೈಸೂರಿಗೆ ರವಾನೆ ಮಾಡಲಾಗುತ್ತಿತ್ತು. corona-infected-woman-birth-baby-ambulance-mysore

ಈ ನಡುವೆ ಮಾರ್ಗಮಧ್ಯೆ ಆ್ಯಂಬುಲೆನ್ಸ್ ನಲ್ಲೇ ಸವಿತಾ  ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ವಿವಿ ಪುರಂ ಆಸ್ಪತ್ರೆಯಲ್ಲಿ ತಾಯಿ ಮಗು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Corona- infected -woman – birth – baby –ambulance-mysore