ರಾಜ್ಯ ಸಚಿವ ಸಂಪುಟ ಸಭೆ: ಕೈಗೊಂಡ ನಿರ್ಣಯಗಳ ಬಗ್ಗೆ  ಮಾಹಿತಿ ನೀಡಿದ ಕಾನೂನು ಸಚಿವ ಮಾಧುಸ್ವಾಮಿ…

ಬೆಂಗಳೂರು,ಸೆಪ್ಟಂಬರ್,15,2020(www.justkannada.in):  ಮೈಸೂರಿನ ಇಡೀ ನಗರದಲ್ಲಿ ಎಲ್ಇಡಿ ಬಲ್ಬ್ ಗಳ ಅಳವಡಿಕೆ ಮಾಡಲು ತೀರ್ಮಾನ ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ ರಾಣಿಚೆನ್ನಮ್ಮ ವಿವಿಗೆ 87.31 ಎಕರೆ ಜಮೀನು ಮಂಜೂರು ಮಾಡುವುದು ಸೇರಿ ಹಲವು ನಿರ್ಣಯಗಳನ್ನ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು.jk-logo-justkannada-logo

ಇಂದು ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಬೆಳಗಾವಿ ತಾಲ್ಲೂಕಿನಲ್ಲಿ ರಾಣಿ ಚೆನ್ನಮ್ಮ ವಿವಿಗೆ 87.31 ಎಕರೆ ಜಮೀನು ಮಂಜೂರು ಮಾಡುವುದು. ನೆಲಂಮಗಲದಲ್ಲಿ ಮೂರು ಎಕರೆ ಜಮೀನನ್ನ ಶ್ರೀಗುರುದೇವ ಸಂಸ್ಥೆಗೆ ಆಶ್ರಮ ನಿರ್ಮಿಸಲು ಮಂಜೂರು ಲಕ್ಕುಂಡಿ ಪ್ರಾಧಿಕಾರ ರಚನೆಗೆ ಅನುಮತಿ ನೀಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸುದ್ಧಿಗೋಷ್ಠಿಯಲ್ಲಿ ಸಚಿವ ಮಾಧುಸ್ವಾಮಿ ಹೇಳಿದ್ದಿಷ್ಟು…

ಮೈಸೂರು ಡಿಸಿ ಕಚೇರಿ ನಿರ್ಮಾಣಕ್ಕೆ  84.69 ಕೋಟಿ ರೂ ಹೆಚ್ಚುವರಿ ಅಂದಾಜು ಮೊತ್ತ  ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಹಾಗೆಯೇ ಮೈಸೂರಿನ ಇಡೀ ನಗರದಲ್ಲಿ ಎಲ್ಇಡಿ ಬಲ್ಬ್ ಗಳ ಅಳವಡಿಕೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೆಲಮಂಗಲದ ಯಲಚಗೇರಿಯಲ್ಲಿ ಸಿದ್ದಗಂಗಾ ಮಠಕ್ಕೆ 9.70 ಸರ್ಕಾರಿ ಗೋಮಾಳ ಭೂಮಿ ಮಂಜೂರು, ಸಾದಿಲ್ವಾರು ನಿಧಿ 80 ರಿಂದ 500 ಕೋಟಿ ರೂ ಗೆ ಏರಿಕೆ ಮಾಡುವುದು. ಹಾಸನ ನಗರಾಭಿವೃದ್ಧಿಗೆ ಬಡಾವಣೆ ನಿರ್ಮಿಸಲು15.31 ಕೋಟಿ ರೂ ಮಂಜೂರು ಮಾಡುವುದು. ಕೈಗಾರಿಕಾ ಕಾಯ್ದೆ ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಗೆ ಒಪ್ಪಿಗೆ ಸೇರಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಎಇಆರ್‌ಟಿ ಸುರಕ್ಷತಾ ಘಟಕ ಅಳವಡಿಸಲು ತೀರ್ಮಾನ ಮಾಡಲಾಗಿದ್ದು  583 ಎಕ್ಸ್‌ ರೇ ಘಟಕಗಳಿಗೆ ಸುರಕ್ಷತಾ ಕ್ರಮಕ್ಕಾಗಿ 11ಕೋಟಿ ಅನುದಾನ ನೀಡಲಾಗುತ್ತದೆ  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಔಷಧ ಖರೀದಿಗೆ 24.90 ಕೋಟಿ ರೂ ಮಂಜೂರು ಮಾಡಲಾಗುವುದು. ಇನ್ನು ಅಗರ ಕೆರೆಯಿಂದ ಆನೇಕಲ್ ಗೆ 50 ಎಂಎಲ್ಡಿ ನೀರು ಪೂರೈಕೆಗೆ ನಿರ್ಧಾರ. ಇದಕ್ಕೆ 30 ಕೋಟಿ ರೂ ಕೊಡಲು ಒಪ್ಪಿಗೆ ಸೂಚನೆ ನೀಡಲಾಗಿದೆ.

ದೆಹಲಿ ಕರ್ನಾಟಕ ಭವನಕ್ಕೆ ಸೆ.18 ರಂದು ಸಿಎಂ ಭೂಮಿ ಪೂಜೆ

ದೆಹಲಿ ಕರ್ನಾಟಕ ಭವನಕ್ಕೆ ಸೆಪ್ಟಂಬರ್ 18 ರಂದು ಸಿಎಂ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಎನ್ಎಂಡಿಸಿ ಗಣಿ ಗುತ್ತಿಗೆ ತೊಡಕು ನಿವಾರಣೆ, ಸಂಡೂರಿನ ಡೋಣಿಮಲೈಯಲ್ಲಿ ಗಣಿಗಾರಿಕೆಗೆ ಒಪ್ಪಿಗೆ ನೀಡಲಾಗಿದ್ದು ವಾರ್ಷಿಕ 600 ಕೋಟಿ ರೂ ಆದಾಯ ನಿರೀಕ್ಷೆ ಮಾಡಲಾಗುತ್ತದೆ. ಜಿಎಸ್ಡಿಪಿಗೆ ಕೇಂದ್ರ ಸರ್ಕಾರ ಶೇ.5 ರಷ್ಟು ಹೆಚ್ಚಳ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ 33 ಸಾವಿರ ಕೋಟಿ ರೂ ಸಾಲ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

ಕೆಪಿಎಸ್ ಸಿ ನೇಮಕಾತಿಯಲ್ಲಿ ಅಕ್ರಮ ವಿಚಾರ: ಯಾವುದೇ ನಿರ್ಧಾರ ಕೈಗೊಂಡಿಲ್ಲ..

ಕೆಪಿಎಸ್ ಸಿ ನೇಮಕಾತಿಯಲ್ಲಿ ಅಕ್ರಮ ವಿಚಾರ, ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಮತ್ತು ಸದಸ್ಯರ ಮೇಲೆ ಭ್ರಷ್ಟಾಚಾರ ಆರೋಪ ಸಂಬಂಧ ಈ ಬಗ್ಗೆ ಪ್ರಾಸಿಕ್ಯೂಶನ್ ಒಳಪಡಿಸಬೇಕೇ  ಬೇಡವೇ ಅನ್ನೋ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ವರದಿ ಪಡೆಯಲು ಸಂಪುಟ ಉಪಸಮಿತಿ ರಚನೆ ಆಗಿದೆ. ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೆ.ಸಿ ಮಾಧುಸ್ವಾಮಿ ತಿಳಿಸಿದರು.

ಸರ್ಕಾರದಲ್ಲಿ ದುಡ್ಢಿನ ಕೊರತೆ ಇಲ್ಲ….

ಇನ್ನು ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ. ಆದ್ರೆ ಮಾಮೂಲಿ ಆದಾಯದಲ್ಲಿ ಸ್ವಲ್ಪ ಕೊರತೆ ಆಗಿದೆ. ಅದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಪ್ರಪಂಚದಾದ್ಯಂತ ಕೋವಿಡ್‌ನಿಂದ ಸಮಸ್ಯೆ ಆಗಿದೆ. ಅದೇ ರೀತಿ ರೆವಿನ್ಯೂ ಸೇರಿದಂತೆ ಸ್ವಲ್ಪ ಕಡಿಮೆ ಆಗಿರೋದು ನಿಜ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

Key words: State- Cabinet –Meeting- Law Minister –Madhuswamy- informed – decisions