ನಟ ದಿಗಂತ್ – ಐಂದ್ರಿತಾ ರೈ ದಂಪತಿಗೆ ಸಿಸಿಬಿಯಿಂದ ನೋಟೀಸ್…

ಬೆಂಗಳೂರು,ಸೆಪ್ಟಂಬರ್,15,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೈ ಅವರಿಗೂ ಸಿಸಿಬಿ ನೋಟೀಸ್ ನೀಡಿದೆ.jk-logo-justkannada-logo

ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿರುವ ಸಿಬಿಬಿ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸಿಸಿಬಿ ಸೂಚನೆ ನೀಡಿದೆ.actor-diginth-actress-aindrita-rai-ccb-notice

ಡ್ರಗ್ಸ್ ದಂಧೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಅವರು ನ್ಯಾಯಾಂಗ ಬಂಧನದಲ್ಲಿದ್ದು ನಟಿ ಸಂಜನಾ ಅವರನ್ನ ಕೋರ್ಟ್ ಎರಡು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ.  ಈ ಮೂಲಕ ನಟಿ ರಾಗಿಣಿ ನಟಿ ಸಂಜನಾ ಡ್ರಗ್ಸ್ ದಂಧೆಯಲ್ಲಿ ಸಿಲುಕ್ಕಿದ್ದು ಇದೀಗ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ.

 

Key words: Actor- Diginth –Actress- Aindrita Rai – CCB- Notice