ರಾಜ್ಯ ವಿಧಾನಸಭಾ ಚುನಾವಣೆ ಮತದಾನ: ಏರುಧ್ವನಿ ಕೂಗಾಡಿ ನೀರು ಕೇಳಿದ್ದಕ್ಕೆ ಲಾಠಿಚಾರ್ಜ್.

ಕೊಡಗು,ಮೇ,10,2023(www.justkannada.in): ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯುಕ್ಕೆ ಇನ್ನ ಒಂದು ಗಂಟೆ ಬಾಕಿ ಇದ್ದು, ಕೊನೆಗಳಿಗೆಯಲ್ಲಿ ಮತದಾನ ಬಿರುಸುಗೊಂಡಿದೆ.

ಈ ಮಧ್ಯೆ ಕೊಡಗು ಜಿಲ್ಲೆ ಮಾದಾಪುರದಲ್ಲಿ ಉರಿ ಬಿಸಿಲಿನಲ್ಲಿ ನಿಂತದ್ದ ಮತದಾರರು ಏರು ಧ್ವನಿಯಲ್ಲಿ ನೀರು ಕೇಳಿದ್ದಕ್ಕೆ ಭದ್ರತಾ ಸಿಬ್ಬಂದಿ ಲಾಠಿಚಾರ್ಜ್ ನಡೆಸಿದ ಆರೋಪ ಕೇಳಿಬಂದಿದೆ.

ಮಾದಾಪುರದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 119ರಲ್ಲಿ ಘಟನೆ ನಡೆದಿದೆ. ಮತದಾರರು ಉರಿಬಿಸಿಲಿನಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ನಡುವೆ  ಈ ವೇಳೆ ಏರು ಧ್ವನಿಯಲ್ಲಿ ಕೂಗಾಡಿ ನೀರು ಕೇಳಿದ್ದು, ಈ ಹಿನ್ನೆಲೆಯಲ್ಲಿ  ಸೇನಾ ಸಿಬ್ಬಂದಿ ಲಾಠಿಚಾರ್ಜ್  ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ವಿರುದ್ದ ಮತದಾರರು ಧಿಕ್ಕಾರ ಕೂಗಿದ್ದಾರೆ ಎನ್ನಲಾಗಿದೆ.

Key words: State -Assembly -Election –Voting-Lathicharge