Friday, September 18, 2026

BDA Apartments

ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದಗೌಡ ಸೇರಿ ನಾಲ್ವರು ಸಚಿವರು ರಾಜೀನಾಮ...
Home Front Page  ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದಗೌಡ ಸೇರಿ ನಾಲ್ವರು ಸಚಿವರು ರಾಜೀನಾಮೆ.

 ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದಗೌಡ ಸೇರಿ ನಾಲ್ವರು ಸಚಿವರು ರಾಜೀನಾಮೆ.

ನವದೆಹಲಿ,ಜುಲೈ,7,2021(www.justkannada.in):  ಕೇಂದ್ರ ಸಚಿವ ಸಂಪುಟ ಪುನರಚನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಮಧ್ಯೆ ಕೇಂದ್ರ ಮಂತ್ರಿ ಸ್ಥಾನಕ್ಕೆ ಡಿ.ವಿ ಸದಾನಂದಗೌಡರು ಸೇರಿ  ನಾಲ್ವರು ಸಚಿವರು ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.jk

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡನೇ ಅವಧಿಯಲ್ಲಿ ಮೊದಲ ಬೃಹತ್ ಸಂಪುಟ ಪುನಾರಚನೆಗೆ ಮುಂಚಿತವಾಗಿ ಸಚಿವರಾದ ಡಿವಿ ಸದಾನಂದಗೌಡ, ಸಂತೋಷ್ ಗಂಗ್ವಾರ್, ರಮೇಶ್ ಪೋಖ್ರಿಯಾಲ್ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಶಿಕ್ಷಣ ಸಚಿವರಾಗಿದ್ದ ರಮೇಶ್ ಪೋಖ್ರಿಯಾಲ್ ಮತ್ತು ಕಾರ್ಮಿಕ ಇಲಾಖೆಯ ಸಚಿವರಾಗಿದ್ಧ ಸಂತೋಷ್ ಗಂಗ್ವಾರ್ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ಧ  ಡಿ.ವಿ ಸದಾನಂದಗೌಡರು ರಾಜೀನಾಮೆ ನೀಡಿದ್ದಾರೆ.

Key words: Three ministers- including -Union Minister -DV Sadananda Gowda- resign.