ಕುರುಬ ಸಮುದಾಯದ ಎಸ್.ಟಿ ಮೀಸಲಾತಿ ಹೋರಾಟ: ನಾಯಕತ್ವ ವಹಿಸಲು ಸಿದ್ಧರಾಮಯ್ಯಗೆ ಆಹ್ವಾನ ನೀಡಿದ ಹೆಚ್.ವಿಶ್ವನಾಥ್…

ಮೈಸೂರು, ಡಿಸೆಂಬರ್,4,2020(www.justkannada.in): ಎಸ್.ಟಿಗೆ ಕುರುಬ ಸಮುದಾಯ ಸೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ  ಹೋರಾಟದ ನಾಯಕತ್ವವನ್ನು ವಹಿಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಹ್ವಾನ ನೀಡಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ನಾನು ನಾಯಕತ್ವ ಬಿಟ್ಟಿದ್ದರಿಂದಲೇ ಸಿದ್ದರಾಮಯ್ಯ ಕಾಂಗ್ರೆಸಿಗೆ ಬಂದಿದ್ದು, ನನ್ನ ಹಿರಿತನವನ್ನ ಬಿಟ್ಟುಕೊಟ್ಟಿದ್ದರಿಂದಲೇ ಅವರು ಮುಖ್ಯಮಂತ್ರಿಯಾಗಿದ್ದು. ಅವರು ಹೋರಾಟಕ್ಕೆ ಬರುವುದಾದರೆ ಅವರ ನಾಯಕತ್ವದಲ್ಲೇ ಹೋರಾಟ ಮಾಡಲು ರೆಡಿ. ನಾವೆಲ್ಲಾ ತ್ಯಾಗ ಮಾಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೇವೆ. ನೀವು ಕುರುಬ ಸಮುದಾಯಕ್ಕೆ ಕೊಟ್ಟಿದ್ದಾದರೂ ಏನು. ನಾವು ನಿಮಗೆ ರಾಜಕೀಯ ನಾಯಕತ್ವವನ್ನು ಬಿಟ್ಟುಕೊಡುತ್ತಿಲ್ಲ ನಮ್ಮ ಸಮುದಾಯದ ಹೋರಾಟಕ್ಕೆ ನೀವು ನಾಯಕರಾಗಿ ಎಂದು ಆಹ್ವಾನ ನೀಡಿದರು.logo-justkannada-mysore

ಹಿಂದುಳಿದ ವರ್ಗದ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಹೋರಾಟ ಹಿಂದಿನಿಂದಲೂ ನಡೆದು ಬಂದಿದೆ. ಸಿದ್ದರಾಮಯ್ಯ ನಮ್ಮ ನಾಯಕರಾಗಿದ್ದವರು. ಅವರು ನಮ್ಮ ಸಮಾಜದಿಂದ ಮುಖ್ಯಮಂತ್ರಿಯಾಗಿದ್ದವರು ಸಹ. ನಿಮ್ಮ ಏಳಿಗೆಗೆ ಇಡೀ ಕುರುಬ ಸಮಾಜ ತನು ಮನವನ್ನ ಅರ್ಪಣೆ ಮಾಡಿದೆ. ಜನತಂತ್ರ ವ್ಯವಸ್ಥೆಯಲ್ಲಿ ಹೋರಾಟವಿಲ್ಲದೇ ಯಾವುದೂ ಸಿಕ್ಕಿಲ್ಲ. ಹಾಗಾಗಿ ಏನೇ ಪಡೆಯಬೇಕೆಂದರೂ ಹೋರಾಟ ಅನಿವಾರ್ಯ . ನೀವು ಮಾರ್ಗದರ್ಶನ ಮಾಡಿದ್ದರೆ  ಕುರುಬ ಸಮಾಜ ಇನ್ನು ಬಹಳ ಎತ್ತರಕ್ಕೆ ಬೆಳೆಯುತ್ತಿತ್ತು. ಸಮಾಜದ ಏಳಿಗೆಗಾಗಿ ನಾವೆಲ್ಲ ಕಾಗಿನೆಲೆ ಕನಕ ಗುರುಪೀಠವನ್ನು ಕಟ್ಟಿದ್ದು. ಆಗ ನೀವು ಇರಲಿಲ್ಲ, ಈಶ್ವರಪ್ಪನವರೂ ಇರಲಿಲ್ಲ. ಎಸ್ಟಿ ಹೋರಾಟವನ್ನು ಯಾರೋ ಹೈಜಾಕ್ ಮಾಡುತ್ತಾರೆ ಎನ್ನುವುದು ಸರಿಯಲ್ಲ. ಉಡುಪಿಯ ಕನಕಗೋಪುರವನ್ನ ಧ್ವಂಸ ಮಾಡಲಾಯಿತು ಅವಾಗ ಎಲ್ಲಿದ್ದೀರಿ ಸಿದ್ದರಾಮಯ್ಯನವರೇ..?  ಎಂದು ಸಿದ್ಧರಾಮಯ್ಯಗೆ ಪ್ರಶ್ನಿಸಿದರು.

ಕುರುಬ ಸಮಾಜವನ್ನು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಆಗಬೇಕಿದೆ. ಕೇವಲ ನಾವು ಮೂರ್ನಾಲ್ಕು ಜನರಷ್ಟೇ ನಾಯಕರಾಗಿದ್ದೇವೆ. ಸಿದ್ದರಾಮಯ್ಯ, ನಾನು, ಈಶ್ವರಪ್ಪ, ರೇವಣ್ಣ ಬಿಟ್ಟರೆ ಮತ್ಯಾರು ನಾಯಕರಿದ್ದಾರೆ. ಕುರುಬ ಸಮಾಜವನ್ನು ಸಿದ್ದರಾಮಯ್ಯ ತಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಬಳಸಿಕೊಂಡು ಈಗ ಹೋರಾಟಕ್ಕೆ ನಮ್ಮ ಜೊತೆ ನಿಲ್ಲದಿದ್ದರೆ ಹೇಗೆ. ನಾವು ಎಂದಿಗೂ ಸಿದ್ದರಾಮಯ್ಯರಿಗೆ ಅಗೌರವ ತೋರಿಲ್ಲ. ಅವರೂ ಈಗಲೂ ನಮ್ಮ ಸಮಾಜದ ನಾಯಕರೇ. ಕುರಿ ಮಾರಿ ಅವರಿಗೆ ದುಡ್ಡನ್ನು ಕೊಟ್ಟಿದ್ದಾರೆ. ಎಸ್ಟಿ ಹೋರಾಟಕ್ಕೆ ಬೆಂಬಲ ನೀಡಿ. ನೀವು ಮುಂದೆ ಇದ್ದು ನಮಗೆ ಮಾರ್ಗದರ್ಶನ ನೀಡಿ. ನಾವು ಹಿಂದೆ ನಿಂತುಕೊಂಡು ನಿಮಗೆ ಬೆಂಬಲ ನೀಡುತ್ತೀವೆ ಎಂದು ಸಿದ್ಧರಾಮಯ್ಯಗೆ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ.

Key words: ST -Reservation -Shepherd Community-fight-MLC-H. Vishwanath -invited –Siddaramaiah-Lead