ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಅಗತ್ಯವಿದ್ದರೆ ಎನ್ ಐಎ ತನಿಖೆಗೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಜುಲೈ,27,2022(www.justkannada.in):  ಬಿಜೆಪಿ  ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಅಗತ್ಯವಿದ್ದರೇ ಎನ್‌ಐಎ ತನಿಖೆಗೆ ವಹಿಸುತ್ತೇವೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಬಂಧಿಸುತ್ತೇವೆ. ಉಗ್ರ ಶಿಕ್ಷೆ ಕೊಡಿಸುತ್ತೇವೆ, ಯಾವುದೇ ಅನುಮಾನಬೇಡ. ದುಷ್ಕರ್ಮಿಗಳನ್ನು ದಮನ ಮಾಡುವವರೆಗೂ ವಿಶ್ರಮಿಸಲ್ಲ. ಹೀಗಾಗಿ ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ಪ್ರಕರಣವನ್ನ ಎನ್ ಐಎ ತನಿಖೆಗೆ ವಹಿಸಬೇಕಾದರೇ ಪ್ರಾಥಮಿಕ ಮಾಹಿತಿ ಪಡೆಯಬೇಕು. ಕೆಲ ನಿಯಮಗಳು ಇರುತ್ತೆ. ಅವೆಲ್ಲವನ್ನೂ ಗಮನಿಸಿ ಅಗತ್ಯವಿದ್ದರೇ ಎನ್ಐಎ ತನಿಖೆಗೆ ವಹಿಸುತ್ತೇವೆ.  ಯಾರೂ ಪ್ರಚೋದನೆ ಹೇಳಿಕೆ ನೀಡಬಾರದು. ಘಟನೆ ನಡೆದ ತಕ್ಷಣ ಅಗತ್ಯಕ್ರಮ ಕೈಗೊಳ್ಳಲು ಸೂಚಿಸಿದ್ಧೇನೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಜೊತೆ ಹಿರಿಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ.  ಪೊಲೀಸರ ವಿಶೇಷ ತಂಡ ರಚಿಸಿ ಹತ್ಯೆ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: BJP-activist-Praveen-murder-case-NIA- CM -Basavaraja Bommai