Tuesday, October 13, 2026

Dasara Wishes

Happy Dasara
Home Front Page ಸಾಂಸ್ಕೃತಿಕ, ಸಂಪ್ರದಾಯಿಕವಾಗಿ ಸರಳ ದಸರಾ ಆಚರಿಸೋಣ – ಸಚಿವ ಡಾ.ನಾರಾಯಣ್ ಗೌಡ…

ಸಾಂಸ್ಕೃತಿಕ, ಸಂಪ್ರದಾಯಿಕವಾಗಿ ಸರಳ ದಸರಾ ಆಚರಿಸೋಣ – ಸಚಿವ ಡಾ.ನಾರಾಯಣ್ ಗೌಡ…

ಮಂಡ್ಯ,ಅಕ್ಟೋಬರ್,12,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ಶ್ರೀರಂಗಪಟ್ಟಣ ದಸರಾವನ್ನು ಸಂಪ್ರದಾಯಿಕವಾಗಿ,  ಸಂಸ್ಕೃತಿವಾಗಿ ಸರಳವಾಗಿ ಆಚರಿಸೋಣ  ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ತಿಳಿಸಿದರು.jk-logo-justkannada-logo

ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ತಾಲ್ಲೂಕು ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ  ನಡೆದ ಶ್ರೀರಂಗಪಟ್ಟಣ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕರೋನ ಮಹಾಮಾರಿ ಇರುವುದರಿಂದ ಶ್ರೀರಂಗಪಟ್ಟಣ ದಸರಾವನ್ನು ಸಂಪ್ರದಾಯಿಕವಾಗಿ,  ಸಂಸ್ಕೃತಿವಾಗಿ ಸರಳವಾಗಿ ಆಚರಿಸೋಣ . ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಂಡ ಈ ಸರಳ ದಸರಾವನ್ನು  ಯಶಸ್ವಿಯಾಗಿ ಆಚರಿಸೋಣ ಎಂದರು.

ನಗರದ ಪ್ರಮುಖ  ಬೀದಿಗಳಗೆ ದೀಪ ಅಲಂಕಾರ ಮಾಡಲಾಗುತ್ತಿದೆ ಮತ್ತು 24 ರಂದು ಮಧ್ಯಾಹ್ನ 3 ಗಂಟೆಗೆ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ ಬಾಳೆ ಗಿಡ ಕಡೆದ ನಂತರ ಶ್ರೀ ಚಾಮುಂಡೇಶ್ವರಿ  ಹಾಗೂ ಗಣಪತಿ ಪೂಜೆ ಮಾಡಿ ರಥೋತ್ಸವನ್ನು ನಗರದ ಪ್ರಮುಖ ಬೀದಿಯಲ್ಲಿ  ಮೆರಿ ಸಿಯ ಮಾಡುವ ಮೂಲಕ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮುಕ್ತಾಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ರವರು ಮಾತನಾಡಿ,  ಮೂರು ದಿನಕೊಮ್ಮೆ ಬನ್ನಿ ಮಂಟಪ ಹಾಗೂ ಕಲ್ಯಾಣಿ ಸುತ್ತಮುತ್ತ ಸ್ವಚ್ಚತಾ ಕಾರ್ಯವನ್ನು ಪುರಸಭೆಯಿಂದ ಮಾಡಬೇಕು ಮತ್ತು ಬಾಬುರಾಯನಕೊಪ್ಪಲಿನಿಂದ ಕೆ.ಆರ್.ಎಸ್ ವರೆಗೂ ಇರುವ ರಸ್ತೆಯ ಡಿವೈಡರ್ ಅನ್ನು ಶುಚಿತ್ವಗೋಳಿಸಿ ಬಣ್ಣ ಬಳಿಸಬೇಕು ಎಂದರು.srirangapatna-dasara-celebrate-cultural-traditionally-simple-minister-narayanagowda

ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜುಲ್ಫಿಕರ್ ಉಲ್ಲಾ, ಜಿಲ್ಲಾ ಪ್ಲೀಸ್ ಎಂಬ ವರಿಷ್ಠಾಧಿಕಾರಿಗಳಾದ ಪರಶುರಾಮ್, ಉಪ ವಿಭಾಗ ಅಧಿಕಾರಿಗಳು ಮತ್ತು ದಸರಾ ಉಪಸಮಿತಿಯ ಅಧ್ಯಕ್ಷರಾದ  ಶಿವಾನಂದ ಮೂರ್ತಿ  ,ಶ್ರೀರಂಗಪಟ್ಟಣದ ತಹಶಿಲ್ದಾರರಾದ ರೂಪ ಮತ್ತು ದೇವಸ್ಥಾನದ ಮುಖ್ಯ ಅರ್ಚಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

key words: Srirangapatna Dasara- celebrate – cultural- traditionally -simple -minister –narayanagowda