ಉಸಿರಾಟ ಸಮಸ್ಯೆ ಐಸಿಯುಗೆ ಹಿರಿಯ ನಟ ಸೌಮಿತ್ರಾ ಚಟರ್ಜಿ

ಬೆಂಗಳೂರು,ಅಕ್ಟೋಬರ್,12,2020(www.justkannada.in)  : ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಬಂಗಾಲಿ ಚಿತ್ರರಂಗದ ಹಿರಿಯ ನಟ ಸೌಮಿತ್ರಾ ಚಟರ್ಜಿ(85) ಸ್ಥಿತಿ ಗಂಭೀರವಾಗಿದೆ.

jk-logo-justkannada-logo

ಕ್ಯಾನ್ಸರ್ಗೆ ತುತ್ತಾಗಿ ಕೆಲವು ವರ್ಷಗಳಿಂದ ಬಳಲುತ್ತಿದ್ದ ಚಟರ್ಜಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ, ಅವರ ಆರೋಗ್ಯದಲ್ಲಿ ಮತ್ತಷ್ಟು ಏರಿಳಿತ ಉಂಟಾಗಿತ್ತು, ಕಳೆದ ರಾತ್ರಿ ಅವರ ಆರೋಗ್ಯದಲ್ಲಿ ಮತ್ತಷ್ಟು ವಿಷಮವಾಗಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Respiratory-problem-senior-ICU-Actor-Soumitra Chatterjee

ಇತ್ತೀಚೆಗೆ ಅವರ ಜೀವನಚರಿತ್ರೆ ಆಧಾರಿಸಿದ `ಅಭಿಜಾನ್ಎಂಬ ಡಾಕ್ಯೂಮೆಂಟರಿಯನ್ನು ಚಿತ್ರೀಕರಿಸಲಾಗಿತ್ತು. ಸತ್ಯಜಿತ್ ಅವರ `ಅಪುರ್ಸಂಸರ್‘ (1959)ದಿಂದ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟ ಚಟರ್ಜಿ `ಆಕಾಶ್ ಕುಸುಮ್‘, `ಚಾರುಲತಾ‘, `ತಪನ್ ಸಿನ್ಹಾಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಹಲವು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

 

ಕಲಾ ಪ್ರಪಂಚದಲ್ಲಿ ಮಾಡಿದ ಸೇವೆಗೆ ಅನೇಕ ಪ್ರಶಸ್ತಿಗಳ ಗೌರವ

ಸೌಮಿತ್ರಾ ಚಟರ್ಜಿ ಕಲಾ ಪ್ರಪಂಚದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ 2004ರಲ್ಲಿ ಪದ್ಮಭೂಷಣ, 2012ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2018ರಲ್ಲಿ ಫ್ರಾನ್ಸ್ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಲಭಿಸಿವೆ.

 

key words : Respiratory-problem-senior-ICU-Actor-Soumitra Chatterjee