ದಾಂಪತ್ಯ ಜೀವನ ಮುಂದುವರಿಸುತ್ತೇನೆ : ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಸ್ಪಷ್ಟನೆ…

ಬೆಳಗಾವಿ,ಅಕ್ಟೋಬರ್,12,2020(www.justkannada.in) : ಗೊಂದಲ, ಸಮಸ್ಯೆಗಳು ಏನೇ ಇದ್ದರೂ, ನಾವಿಬ್ಬರೂ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಕೆ.ಕಲ್ಯಾಣ ಜೊತೆಗೆ ದಾಂಪತ್ಯ ಜೀವನ ಮುಂದುವರಿಸುತ್ತೇನೆ ಎಂದು ಗೀತರಚನೆಕಾರ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಹೇಳಿದ್ದಾರೆ.jk-logo-justkannada-logo

ಮಾಧ್ಯಮಗಳೊಂದಿಗೆ ಮಾತನಾಡಿರುವ ಅಶ್ವಿನಿ, ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿವಾಹ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆ ಆರಂಭಿಸಿದ್ದೇನೆ ಎಂದಿದ್ದಾರೆ.

ಯಾವುದೋ ಕೆಟ್ಟ ಘಳಿಗೆಯಿಂದ ಇಷ್ಟೆಲ್ಲ ಅವಾಂತರ

ಯಾವುದೋ ಕೆಟ್ಟ ಘಳಿಗೆಯಿಂದ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ. ನಮ್ಮ ಕುಟುಂಬ ಯಾವುದೋ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ನಮ್ಮನ್ನು ವಶೀಕರಣ ಮಾಡಿಕೊಂಡಿದ್ದರು. ನನ್ನ, ತಂದೆ ಹಾಗೂ ತಾಯಿಯ ಆಸ್ತಿ ಬರೆಸಿಕೊಂಡಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Continue-Marriage-Ashwini-wife-K.Kalyan

ಪ್ರಾಣ ಉಳಿಸಿಕೊಳ್ಳಲು ಪೂಜೆ ಮಾಡಿಸಬೇಕು ಎಂದು ಅವರಿಬ್ಬರೂ ಹೇಳಿದ್ದರು. ಅವರಿಗೆ ಪೂಜೆಗೆಂದು ಹಣ ಕೊಡುತ್ತಿದ್ದೆವು. ಆದರೆ, ನಾವು ಪಾಲ್ಗೊಳ್ಳುತ್ತಿರಲಿಲ್ಲ. ಅದೆಂತಹ ಪೂಜೆ ಮಾಡುತ್ತಿದ್ದರೋ ಗೊತ್ತಿಲ್ಲ. ಈಗ ಅದೆಲ್ಲದರಿಂದ ಸಂಪೂರ್ಣವಾಗಿ ಹೊರಬಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಮನೆಗೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ

ಬೆಳಗಾವಿ ಪೊಲೀಸರು ಪರಿಸ್ಥಿತಿಯನ್ನು ಚೆನ್ನಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ದೇವರ ರೂಪದಲ್ಲಿ ಬಂದು ಕಾಪಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾನೂನಿನಿಂದ ನಮಗೆ ಸಹಾಯ ದೊರೆತಿದೆ. ಯಾರನ್ನಾದರೂ ಮನೆಗೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದುವರಿಯಬೇಕು ಎಂದು ಸಲಹೆ ನೀಡಿದ್ದಾರೆ.

key words : Continue-Marriage-Ashwini-wife-K.Kalyan