ಸಚಿವ ಶ್ರೀರಾಮುಲು ಖಾತೆ ಬದಲಾಯಿಸಿದ ವಿಚಾರ: ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ…?

ದಾವಣಗೆರೆ,ಅಕ್ಟೋಬರ್,12,2020(www.justkannada.in):  ಶೋಷಿತರ ಸೇವೆ ಮಾಡಲು ಸಚಿವ ಶ್ರೀರಾಮುಲು ಸೂಕ್ತ ವ್ಯಕ್ತಿ. ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸೂಕ್ತವಾದದ್ದು ಎಂದು  ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.jk-logo-justkannada-logo

ಸಚಿವ ಶ್ರೀರಾಮುಲು ಅವರಿಂದ ಆರೋಗ್ಯ ಖಾತೆ ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಸಚಿವ ಸ್ಥಾನ ಬದಲಾಯಿಸುವುದು ಸಿಎಂಗೆ ಬಿಟ್ಟ ವಿಚಾರ. ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸೂಕ್ತ. ಸಮಾಜ ಕಲ್ಯಾಣ ಇಲಾಖೆ ಎಂಬುದು ಬಹಳ ದೊಡ್ಡ ಇಲಾಖೆ. ಅದನ್ನು ಸಾಮಾನ್ಯ ಇಲಾಖೆ ಎಂದು ಪರಿಗಣಿಸುವುದು ತಪ್ಪು. ಸಮಾಜ ಕಲ್ಯಾಣ ಇಲಾಖೆ ಯಾರಿಗೆ ನೀಡಿದರೆ ಸೂಕ್ತ ಎಂಬ ಬಗ್ಗೆ ಹಲವು ದಿಗಳಿಂದ ಚರ್ಚೆ ನಡೆದಿತ್ತು ಅದರಂತೆ ಈಗ ಶ್ರೀರಾಮುಲು ಅವರಿಗೆ ನೀಡಲಾಗಿದೆ ಎಂದರು.Minister -Sreeramulu's –health department- Minister-KS Eshwarappa

ಆರ್. ಆರ್ ನಗರ ಟಿಕೆಟ್ ವಿಚಾರ: ಮುನಿರತ್ನಗೆ ಅನ್ಯಾಯವಾಗಲ್ಲ…

ಆರ್. ಆರ್ ನಗರ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಮುನಿರತ್ನ ಅವರು ರಾಜೀನಾಮೆ ನೀಡಿದ್ದರಿಂಧ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅವರಿಗೆ ಟಿಕೆಟ್ ನೀಡಿದರೇ ಸೂಕ್ತ. ಮುನಿರತ್ನ ಅವರಿಗೆ ಅನ್ಯಾಯವಾಗಲ್ಲ. ಅವರಿಗೆ ಅನ್ಯಾಯವಾಗಬಾರದು ಎಂದು ಹೇಳಿದರು.

key words: Minister -Sreeramulu’s –health department- Minister-KS Eshwarappa