ಸ್ಮಾರ್ಟ್ ಫೋನ್ ಮಾರಾಟ: ಭಾರತದಲ್ಲಿ ಶಿಯೋಮಿ ನಂ.1

2109ರ ಎರಡನೇ ತ್ರೈಮಾಸಿಕದಲ್ಲೂ ಸಹ ಶಿಯೋಮಿ ತನ್ನ “ಭಾರತದ ಅಗ್ರ ಸ್ಮಾರ್ಟ್ಫೋನ್ ಮಾರಾಟಗಾರ” ಎಂಬ ಪಟ್ಟವನ್ನು ಉಳಿಸಿಕೊಂಡಿದೆ.
ಚೀನಾದ ಎಲೆಕ್ಟ್ರಾನಿಕ್ಸ್ ದೈತ್ಯವು ಜೂನ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ 10.4 ಮಿಲಿಯನ್ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಿದ್ದು, ಮಾರುಕಟ್ಟೆಯಲ್ಲಿ 28.3% ಪಾಲು ಹೊಂದಿದೆ ಎಂದು ಸಂಶೋಧನಾ ಸಂಸ್ಥೆ ಐಡಿಸಿ ವರದಿ ಮಾಡಿದೆ. ಸ್ಯಾಮ್ಸಂಗ್ ಇದೇ ಅವಧಿಯಲ್ಲಿ 9.3 ಮಿಲಿಯನ್ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಿದ್ದು, ಮಾರುಕಟ್ಟೆಯಲ್ಲಿ 25.3% ಪಾಲು ಹೊಂದಿದೆ

ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ 36.9 ಮಿಲಿಯನ್ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಲಾಗಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು 9.9% ಹೆಚ್ಚಾಗಿದೆ ಎಂದು ಐಡಿಸಿ ವರದಿ ಮಾಡಿದೆ. ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಮಾರಾಟವಾದ ಹ್ಯಾಂಡ್‌ಸೆಟ್‌ಗಳ ಅತ್ಯಧಿಕ ಪ್ರಮಾಣ ಇದಾಗಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.

ಶಿಯೋಮಿಯನ್ನು ಪ್ರತಿಸ್ಪರ್ಧಿಗಳಿಗೆ ಕಠಿಣ ಸವಾಲೊಡ್ಡುತ್ತಿದ್ದು, ಮಾರಾಟ ಮಾಡುವ ಯಾವುದೇ ಯಂತ್ರಾಂಶದಲ್ಲಿ ಕೇವಲ 5ರಷ್ಟು ಲಾಭವನ್ನು ನೀಡುತ್ತದೆ ಎಂದು ಹೇಳುತ್ತದೆ. ಜತೆಗೆ ಭಾರತದಲ್ಲಿ ತನ್ನ ಸ್ಥಳೀಯ ಉತ್ಪಾದನಾ ಪ್ರಯತ್ನಗಳನ್ನು ವಿಸ್ತರಿಸಿದೆ. ಹಾಗೆಯೇ ದೇಶದಲ್ಲಿ 10,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಇದರಲ್ಲಿ 90% ಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ. ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಕ್ಷೀಣಿಸುತ್ತಿದ್ದರೆ, ಭಾರತಲ್ಲಿ ಮಾತ್ರ ಇದು ವಿರುದ್ಧವಾಗಿದೆ.