Saturday, August 22, 2026

BDA Apartments

Home Cinema ಯೂಟ್ಯೂಬ್’ನಲ್ಲಿ ದಾಖಲೆ ಬರೆದ ‘ರೌಡಿ ಬೇಬಿ’ !

ಯೂಟ್ಯೂಬ್’ನಲ್ಲಿ ದಾಖಲೆ ಬರೆದ ‘ರೌಡಿ ಬೇಬಿ’ !

ಬೆಂಗಳೂರು, ಆಗಸ್ಟ್ 14, 2019 (www.justkannada.in): ಧನುಷ್ ಮತ್ತು ಸಾಯಿ ಪಲ್ಲವಿ ನಟನೆಯ ‘ಮಾರಿ 2’ ಚಿತ್ರದ ‘ರೌಡಿ ಬೇಬಿ’ ಮತ್ತೊಂದು ದಾಖಲೆ ನಿರ್ಮಿಸಿದೆ.

ಪ್ರಭುದೇವ ನೃತ್ಯ ಸಂಯೋಜನೆಯಿರುವ ರೌಡಿ ಬೇಬಿ ಹಾಡು ಯೂಟ್ಯೂಬ್‌ನಲ್ಲಿ 600 ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ ಹಾಡು ಖ್ಯಾತಿಗೆ ಪಾತ್ರವಾಗಿದೆ.

‘ರೌಡಿ ಬೇಬಿ’ ಹಾಡಿಗೆ ಸಂಗೀತವನ್ನು ಯುವನ್ ಶಂಕರ್ ರಾಜ ಸಂಯೋಜಿಸಿದ್ದರು. ಧನುಷ್ ಹಾಡಿಗೆ ಸಾಹಿತ್ಯ ಬರೆಯುವುದರ ಜೊತೆಗೆ ಅವರೇ ಸ್ವತಃ ಹಾಡಿದ್ದಾರೆ. ‘ರೌಡಿ ಬೇಬಿ’ ಹಾಡಿಗೆ ಸಾಯಿ ಪಲ್ಲವಿ ಮತ್ತು ಧನುಷ್ ಅವರು ಭರ್ಜರಿ ಸ್ಟೆಪ್ಸ್ ಹಾಕಿದ್ದರು.