ಶಾಲಾ ಬಸ್ ಮೇಲೆ ಬಿದ್ದ ಮರ: ವಿದ್ಯಾರ್ಥಿಗಳು ಅಪಾಯದಿಂದ ಪಾರು…

ದಕ್ಷಿಣ ಕನ್ನಡ,ಆ,14,2019(www.justkannada.in):  ಮಳೆಯಿಂದಾಗಿ ಶಾಲಾ ಬಸ್ ಮೇಲೆ ಮರ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ  ಮಂಗಳೂರಿನ ನಂತೂರ್ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಶಾಲೆಗೆ ತೆರಳುತ್ತಿದ್ದ ಬಸ್ ಮೇಲೆ ಏಕಾಏಕಿ ಮರ ಬಿದ್ದಿದ್ದು ಬಸ್ ನಲ್ಲಿದ್ದ 17 ಮಂದಿ ವಿದ್ಯಾರ್ಥಿಗಳು ಸದ್ಯ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಪ್ರಾಂಶುಪಾಲರು  ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

Key words:  fallen tree – school bus-Students- escape – danger.