ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫೋನ್ ಕದ್ಧಾಲಿಕೆ ಮಾಡಿದ್ದಾರೆ:– ಅನರ್ಹ ಶಾಸಕ ಹೆಚ್,ವಿಶ್ವನಾಥ್ ಗಂಭೀರ ಆರೋಪ..

ಮೈಸೂರು,ಆ,14,2019(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದ ನನ್ನ ಫೋನ್ ಕದ್ಧಾಲಿಕೆ ಆಗಿದೆ. ನೀವು ಬಂದು ರಾಜೀನಾಮೆ ವಾಪಾಸ್ ತಗೋಳಿ ಎಂದು ಒತ್ತಡ ಬಂದಿತ್ತು  ಎಂದು ಅನರ್ಹ  ಹೆಚ್ ವಿಶ್ವನಾಥ್  ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನರ್ಹ ಶಾಸಕ ಹೆಚ್,ವಿಶ್ವನಾಥ್,  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಟೆಲಿಫೋನ್ ಕದ್ದಾಲಿಕೆ ಆಗಿದೆ. ಯಾವುದೇ ವ್ಯಕ್ತಿ ಅವನ ಹೆಂಡತಿಯ ಫೋನ್ ಕಾಲ್ ಟ್ರೇಸ್  ಮಾಡುವ ಹಾಗಿಲ್ಲ. 17 ಜನ  ಶಾಸಕರ ಫೋನ್ ಡೀಟೇಲ್ಸ್ ತಗೊಂಡು ನಮಗೆ ಧಮ್ಕಿ ಹಾಕ್ತಿದ್ರು. ನಮಗೆ ಫೋನ್  ಮಾಡಿ  ಆಡಿಯೋ ಹೊರಗೆ ಬಿಡ್ತೇನೆ ಎಂದು ಎದುರಿಸುತ್ತಿದ್ದರು.ಒಬ್ಬ ಜೆಡಿಎಸ್  ರಾಜ್ಯಾದ್ಯಕ್ಷನ  ಫೋನ್  ಕದ್ದಾಲಿಕೆ ಮಾಡಿದ  ಸಿಎಂ ನನ್ನ ಮೇಲೆ ನಂಬಿಕೆ ಇಲ್ಲದೆ ಕದ್ದಾಲಿಕೆ ಮಾಡಿದ್ದಾರೆ. ಪೊಲೀಸ್ ಆಫೀಸರ್ಸ್ ಮೇಲೂ  ಫೋನ್  ಕದ್ದಾಲಿಕೆ ಆಗಿದೆ ಇದು  ಮಹಾಪರಾಧ ಎಂದು ಕಿಡಿಕಾರಿದರು.

ಫೋನ್ ಕದ್ದಾಲಿಕೆ ಆಗ್ತಿದೆ  ಎಂದು 6 ತಿಂಗಳ ಹಿಂದೆ ಹೆಚ್ ಕೆ ಪಾಟೀಲ್ ಹಾಗೂ ಆರ್ ಅಶೋಕ್ ಅವರೇ ಹೇಳಿದ್ರು. ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ರಾಜ್ಯದ  ಕಾನೂನಿನ  ಉಲ್ಲಂಘನೆ ಮಾಡಿದ್ರು. ಫೋನ್ ಕದ್ದಾಲಿಕೆ ಇದೆ. ಮೊದಲಲ್ಲ ದೇಶದಲ್ಲಿ ಇಂದಿನಿಂದಲೂ ಈ ಅಪರಾಧ ನಡೆದಿದೆ. ಈ  ಹಿನ್ನೆಲೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ ಎಂದು ಹೆಚ್,ವಿಶ್ವನಾಥ್ ತಿಳಿಸಿದರು.

ರಾಜ್ಯದಲ್ಲಿ ಪ್ರವಾಹ ಹಿನ್ನೆಲೆ: ಸರ್ಕಾರ ಮತ್ತು ಸಮಾಜ ಒಟ್ಟಾಗಿ ಸೇರಿ  ಕಾರ್ಯನಿರ್ವಹಿಸಬೇಕಿದೆ.

ರಾಜ್ಯದಲ್ಲಿ  ಪ್ರವಾಹ ಉಂಟಾಗಿದೆ. ಹೀಗಾಗಿ ಸರ್ಕಾರ ಮತ್ತು ಸಮಾಜ ಒಟ್ಟಾಗಿ ಸೇರಿ  ಕಾರ್ಯನಿರ್ವಹಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರಿಗೊಬ್ಬರ ಸಹಕಾರದಿಂದ ಸಂತ್ರಸ್ಥರನ್ನ ಕಾಪಾಡಬೇಕಿದೆ. ಹೆಚ್ ಡಿ  ದೇವೇಗೌಡರು ಕೂಡ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಜೊತೆ ನಾವು ಇರುತ್ತೇವೆ, ನೀವು ಏಕಾಂಗಿಯಲ್ಲ ಎಂದು ಬರೆದಿದ್ದಾರೆ.ಅವರು ಪತ್ರವನ್ನ ನಾನು ಸ್ವಾಗತಿಸುತ್ತೇವೆ. ಈ  ವಿಚಾರದಲ್ಲಿ  ಮೂರು ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಸಿಸಬೇಕು ಎಂದು  ಅಭಿಪ್ರಾಯ ಸೂಚನೆ ತಿಳಿಸಿದ್ದಾರೆನಿಜವಾದ ಚಾಲೆಂಜ್ ನಮಗೆ ಈಗ ಶುರುವಾಗಿದೆ. ಬಹಳಷ್ಟು ಜನರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಸಮಾಜ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೆಚ್ಚು  ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಬಾದಾಮಿಯಲ್ಲೂ ಇಲ್ಲ, ಮೈಸೂರಿನಲ್ಲೂ ಕಾಣುತ್ತಿಲ್ಲ.

ಸಿ.ಎಲ್ ಪಿ  ಲೀಡರ್ ಸಿದ್ದರಾಮಯ್ಯ ಎಲ್ಲೋಗಿದ್ದರೋ ಗೊತ್ತಿಲ್ಲ,  ಈ ರೀತಿಯ ಪರಿಸ್ಥಿತಿ ನಿಭಾಯಿಸಿರುವ ಅನುಭವ ಸಿದ್ದರಾಮಯ್ಯಗೆ ಇದೆ. ಅವರು ಬಾದಾಮಿಯಲ್ಲೂ, ಮೈಸೂರಿನಲ್ಲೂ ಕಾಣುತ್ತಿಲ್ಲ. ಅವರು‌ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಇಂತಹ ವಿಷಯದಲ್ಲಿ ಬಹಳಷ್ಟು ಅನುಭವವಿದೆ. ಅವರು ಹೊರಗಡೆ ಬಂದು ಮಾತನಾಡಲಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಶಾಸಕ  ಜಿಡಿ ದೇವೇಗೌಡ ಬಿಜೆಪಿಗೆ ಸೇರುವ ಬಗ್ಗೆ ಸುಳಿವು ನೀಡಿದ ಮಾಜಿ ಶಾಸಕ  ಹೆಚ್ ವಿಶ್ವನಾಥ್…

ಇದೇ ವೇಳೆ ಶಾಸಕ  ಜಿಡಿ ದೇವೇಗೌಡ ಬಿಜೆಪಿಗೆ ಸೇರುವ ಬಗ್ಗೆ ಸುಳಿವು ನೀಡಿದ ಮಾಜಿ ಶಾಸಕ  ಹೆಚ್ ವಿಶ್ವನಾಥ್, ಜಿಟಿ ದೇವೇಗೌಡರಿಗೆ  ಬಿಜೆಪಿ ಹಳೆ ಪಾರ್ಟಿ. ಜಿಟಿಡಿ -ಬಿಎಸ್ವೈ  ಭೇಟಿಯಾಗಿದ್ದು  ನಿಜ. ಜಿಟಿಡಿ ಅವರನ್ನ ನಾನೇನು ಕರೆದುಕೊಂಡು ಹೋಗಿರ್ಲಿಲ್ಲ, ಅವರೇ  ಬಿಎಸ್ವೈ ಮನೆಗೆ ಬಂದಿದ್ರು. ಜಿಟಿ ದೇವೇಗೌಡ ಅವರು ಒಬ್ಬ ರಾಜ್ಯದ ಮುಖ್ಯಮಂತ್ರಿಯನ್ನ  ಭೇಟಿ  ಮಾಡಿದ್ದೂ ನಿಜ ಅದರಲ್ಲಿ ತಪ್ಪೇನಿದೆ..?ಶಾಸಕರಾದ  ಮೇಲೆ ಅವರ ಕೆಲಸಗಳು ಇರ್ತವೆ  ಹೀಗಾಗಿ  ಭೇಟಿ  ನೀಡಿದ್ದಾರೆ ಅಷ್ಟೇ ಎಂದು ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ತಿಳಿಸಿದರು.

ಮೈಸೂರು ದಸರಾ ವಿಜೃಂಭಣೆಯಿಂದಲೇ ಆಗಬೇಕು….

ಮೈಸೂರು ದಸರಾ ವಿಜೃಂಭಣೆಯಿಂದಲೇ ಆಗಬೇಕು.ಯಾವುದೇ ಕಾರಣಕ್ಕೂ‌ ನೆರೆ ಬರ ಅಂತ ಹೇಳಿ ಸರಳ ದಸರಾ ಮಾಡ ಬಾರದು. ದಸರಾ ಉತ್ಸವ ಮಾಡೋದು ಚಾಮುಂಡೇಶ್ವರಿ ತಾಯಿ ದುಷ್ಟರ ಶಿಕ್ಷಿಸಿ ಶಿಷ್ಠರ ರಕ್ಷಣೆ ಮಾಡಲಿ ಅಂತ.  ನಾಡಿಗೆ ಒಳ್ಳೆಯದಾಗಲಿ ಅಂತಾನೇ ಆಚರಣೆ ಮಾಡೋದು. ನಾನು ಸಹ ಉಸ್ತುವಾರಿಯಾಗಿದ್ದೆ.  ಆಗಲೂ ಬರ ಇತ್ತು. ದಸರಾ ಉತ್ಸವವನ್ನು ಸ್ಪನ್ಸಾರ್ ಶಿಫ್ ನಿಂದಲೇ ಮಾಡಬಹುದು. ಸರ್ಕಾರದ ಹಣವನ್ನೇ ಖರ್ಚು ಮಾಡಬೇಕೆಂದು ಇಲ್ಲ. ನಾವು ಉಸ್ತುವಾರಿ ಆಗಿ ಆಚರಣೆ ಮಾಡ್ದಾಗ ಒಂದು ಕೋಟಿ ಐದು ಲಕ್ಷ ಹಣ ಸಂಗ್ರವಾಗಿತ್ತು. ದಸರಾ ಉತ್ಸವ ಮಾಡಿ ಸರ್ಕಾರಕ್ಕೆ ಹಣ ವಾಪಾಸ್ ಕೊಟ್ಟಿದ್ದೆ ಎಂದು ಹೆಚ್.ವಿಶ್ವನಾಥ್  ಸಲಹೆ ನೀಡಿದರು.

Key words: Former CM- HD Kumaraswamy Phone tapping-H, Vishwanath -accused