ಪ್ರಿನ್ಸ್ ಮಹೇಶ್ ಬಾಬು ‘ಲಿಟ್ಲ್ ಪ್ರಿನ್ಸೆಸ್’ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ !

ಹೈದರಾಬಾದ್, ಆಗಸ್ಟ್ 14, 2019 (www.justkannada.in): ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹೇಶ್ ಬಾಬು ಪತ್ನಿ ನಮ್ರತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗಳು ಸಿತಾರಾ ತಮ್ಮ ತಂದೆ ಮಹೇಶ್ ಬಾಬು ಚಿತ್ರದ ಪಾಲಾ ಪಿಟ್ಟಾ ಎಂಬ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.

ಈ ವಿಡಿಯೋ ಇದೀಗ ಬಹಳಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಮಹೇಶ್ ಬಾಬು ತಮ್ಮ ಕೆಲಸದಲ್ಲಿ ಎಷ್ಟೇ ನಿರತರಾಗಿದ್ದರೂ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಮಾತ್ರ ಮರೆಯುವುದಿಲ್ಲ.