ಇಂದು ಕ್ರಿಸ್ ಗೇಲ್’ಗೆ ಭಾರತದ ವಿರುದ್ಧ ವೃತ್ತಿ ಜೀವನದ ಕೊನೆ ಪಂದ್ಯ

ಪೋರ್ಟ್ ಆಫ್ ಸ್ಟೇನ್, ಆಗಸ್ಟ್ 14, 2019 (www.justkannada.in): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3 ನೇ ಹಾಗೂ ಅಂತಿಮ ಏಕದಿನ ಪಂದ್ಯ ಇಂದು ನಡೆಯಲಿದೆ.

ಭಾರತಕ್ಕೆ ಸರಣಿ ಗೆಲ್ಲುವ ಅವಕಾಶವಿದ್ದರೆ, ವೆಸ್ಟ್ ಇಂಡೀಸ್ ಗೆ ಸಮಬಲ ಸಾಧಿಸುವ ಗುರಿ ಇದೆ. ಟೀಂ ಇಂಡಿಯಾದಲ್ಲಿ ಇಂದಿನ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡುವುದು ಅನುಮಾನವಾಗಿದೆ.

ಇನ್ನು ಕಳೆದ ಪಂದ್ಯದಲ್ಲಷ್ಟೇ ವಿಂಡೀಸ್ ಪರ 300 ಏಕದಿನ ಪಂದ್ಯವಾಡಿದ ಕ್ರಿಸ್ ಗೇಲ್ ಗೆ ಇದು ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ. ಏಕದಿನ ಮತ್ತು ಟೆಸ್ಟ್ ಮಾದರಿಯಿಂದ ಕ್ರಿಸ್ ಗೇಲ್ ನಿವೃತ್ತಿಯಾಗಲಿದ್ದಾರೆ.