ಪ್ರೀತಿಸಿ ಕೈಕೊಟ್ಟ ಯುವಕ: ಬೇಸತ್ತ ಯುವತಿಯಿಂದ ಪ್ರಿಯತಮನ ಮನೆ ಬಾಗಿಲ್ಲೇ ವಿಷಕುಡಿದು ಆತ್ಮಹತ್ಯೆ ಯತ್ನ

ಬೆಂಗಳೂರು:ಆ-14:(www.justkannada.in) ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ್ದಕ್ಕೆ ಬೇಸತ್ತ ಯುವತಿ, ಆತನ ಮನೆಗೆ ತೆರಳಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ರಾಜಾಜಿ ನಗರದಲ್ಲಿ ನಡೆದಿದೆ.

ಹಾಸನ ಮುಲದ 32 ವರ್ಷದ ಯುವತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವಳು. ಯುವತಿ ಎಂ ಜಿ ರೋಡ್ ನಲ್ಲಿರುವ ಪ್ರತಿಷ್ಠಿತ ಆಟೋಮೊಬೈಲ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿಳು. ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕನೊಂದಿಗೆ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ, ಡೇಟಿಂಗ್ ವರೆಗೂ ಬಂದಿದೆ.

ಹಲವು ತಿಂಗಳುಗಳಕಾಲ ಯುವಕ-ಯುವತಿ ಡೇಟಿಂಗ್ ನಲ್ಲಿದ್ದಾರೆ. ಬಳಿಕ ಯುವತಿ ತನ್ನನ್ನು ವಿವಾಹವಾಗುವಂತೆ ಕೇಳಿದ್ದಾಳೆ. ಮದುವೆ ಪ್ರಸ್ತಾಪ ಮಾಡುತ್ತಿದ್ದಂತೆ ಯುವಕ ಯುವತಿಯನ್ನು ಅವೈಡ್ ಮಾಡಲು ಆರಂಭಿಸಿದ್ದಾನೆ.

ರಾಜಾಜಿನಗರದ 1st ಬ್ಲಾಕ್ ನಲ್ಲಿರುವ ಯುವಕನ ಮನೆಗೆ ತೆರಳಿದ ಯುವತಿ, ಮತ್ತೆ ತನ್ನ ವಿವಾಹವಾಗುವಂತೆ ಕೇಳಿದ್ದಾಳೆ. ಆಗಲೂ ಯುವಕ ವಿವಾಹವಾಗಲು ನಿರಾಕರಿಸಿದ್ದಾನೆ. ಇದರಿಂದ ಬೇಸರಗೊಂಡ ಯುವತಿ, ಅದಾಗಲೇ ತನ್ನೊಂದಿಗೆ ತಂದಿದ್ದ ಕೀಟನಾಶಕವನ್ನು ಸೇವಿಸಿದ್ದಾಳೆ. ಬಾಗಿಲ ಬಳಿ ಒದ್ದಾಡುತ್ತಾ ಬಿದ್ದ ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಯುವಕ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಸಧ್ಯ ಚೇತರಿಸಿಕೊಂಡಿರುವ ಯುವತಿ ಈ ಕುರಿತು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಯುವಕ ಹಾಗೂ ಆತನ ಮನೆಯವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಐಪಿಸಿ ಸೆಕ್ಷನ್ 417 ಹಾಗೂ 504 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೀತಿಸಿ ಕೈಕೊಟ್ಟ ಯುವಕ: ಬೇಸತ್ತ ಯುವತಿಯಿಂದ ಪ್ರಿಯತಮನ ಮನೆ ಬಾಗಿಲ್ಲೇ ವಿಷಕುಡಿದು ಆತ್ಮಹತ್ಯೆ ಯತ್ನ
Spurned, woman tries to end life at lover’s doorstep