ಸ್ಮಾರ್ಟ್ ಸಿಟಿ ಕಾಮಗಾರಿ: ಬೆಂಗಳೂರಿನ ಸಂಚಾರ ಮಾರ್ಗದಲ್ಲಿ ಬದಲಾವಣೆ

ಬೆಂಗಳೂರು, ಡಿಸೆಂಬರ್ 19, 2021 (www.justkannada.in): ಸ್ಮಾರ್ಟ್ ಸಿಟಿ ವತಿಯಿಂದ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ, ಪ್ಯಾಲೇಸ್ ರಸ್ತೆ ಮತ್ತು ಕನ್ನಿಂಗ್ ಹ್ಯಾಂ ರಸ್ತೆಯಲ್ಲಿನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ.

ವಾಹನ ಸಂಚಾರರು ಕೆಲ ಪರ್ಯಾಯ ಮಾರ್ಗದಲ್ಲಿ ಓಡಾಡುವಂತೆ ಬೆಂಗಳೂರು ಸಿಟಿ ಸಂಚಾರ ಪೊಲೀಸ್ ಮಾಹಿತಿ ನೀಡಿದೆ.

ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ ಮಿಲ್ಲರ್ಸ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಹಮ್ಮಿಕೊಂಡಿರುವ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಪ್ರಯುಕ್ತ ಪ್ಯಾಲೇಸ್ ರಸ್ತೆ ಮತ್ತು ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಪ್ರಸ್ತುತ ಇರುವ ಸಂಚಾರ ವ್ಯವಸ್ಥೆಯನ್ನು ಮಾರ್ಪಡಿಸಿ, ತಾತ್ಕಾಲಿಕವಾಗಿ ಈ ಕೆಳಕಂಡ ವ್ಯವಸ್ಥೆ ಮಾಡಲಾಗಿದೆ.

ಪ್ಯಾಲೇಸ್ ರಸ್ತೆಯ ಮೂಲಕ ಸಾಗುವಂತ ವಾಹನ ಸವಾರರರು, ಅವಿನಾಶ್ ಪೆಟ್ರೋಲ್ ಬಂಕ್ ಜಂಕ್ಷನಿಂದ ಹೈಗ್ರೌಂಡ್ಸ್ ಜಂಕ್ಷನ್ ವರೆಗಿನ ಏಕ ಮುಖ ಸಂಚಾರ ವ್ಯವಸ್ಥೆಯನ್ನು, ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಎರಡು ದಿಕ್ಕಿನಲ್ಲಿಯೂ ಈ ರಸ್ತೆಯಲ್ಲಿ ವಾಹನ ಸಂಚಾರ ಮಾಡಬಹುದಾಗಿದೆ.

ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಅವಿನಾಶ್ ಪೆಟ್ರೋಲ್ ಬಂಕ್ ಜಂಕ್ಷನ್ ನಿಂದ ಚಂದ್ರಿಕಾ ವೃತ್ತದವರೆಗೆ ಪಶ್ಚಿಮದಿಂದ ಪೂರ್ವಕ್ಕೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ವಿರುದ್ಧ ದಿಕ್ಕಿನ ಸಂಚಾರ ವ್ಯವಸ್ಥೆಯನ್ನು ನಿರ್ಬಂಧಿಸಿರೋದನ್ನು ತೆರವುಗೊಳಿಸಲಾಗಿದೆ.

ಈ ರಸ್ತೆಯಲ್ಲಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಅನುವು ಮಾಡಿಕೊಟ್ಟು, ವಿರುದ್ಧ ದಿಕ್ಕಿನ ಸಂಚಾರವನ್ನು ಅಂದ್ರೇ ಅವಿನಾಶ್ ಪೆಟ್ರೋಲ್ ಬಂಕ್ ನಿಂದ ಚಂದ್ರಿಕಾ ಜಂಕ್ಷನ್ ವರೆಗೆ ಸಾಗುವ ಸಂಚಾರ ನಿರ್ಬಂಧಿಸಲಾಗಿದೆ.