ಉಪ್ಪು ತಿಂದವರು ನೀರು ಕುಡಿಯಲೇಬೇಕು: ಯಾವ ಯಾವ ರಾಜಕಾರಣಿಗಳು ಇದ್ದಾರೆ ಎಂದು ಮನ್ಸೂರ್ ಖಾನ್ ಮೊದಲು ಲಿಸ್ಟ್ ಕೊಡಲಿ- ಸಚಿವ ಜಮೀರ್ ಅಹ್ಮದ್ ಖಾನ್

ಬೆಂಗಳೂರು,ಜೂ,24,2019(www.justkannada.in):  ಐಎಂಎ ಕಂಪನಿಯಿಂದ ಹೂಡಿಕೆದಾರರಿಗೆ ವಂಚನೆ ಪ್ರಕರಣ ಸಂಬಂಧ, ಐಎಂಎ ಮಾಲೀಕ ಮನ್ಸೂರ್ ಖಾನ್ ವಿಡಿಯೋ ಬಿಡುಗಡೆ ಹಿನ್ನೆಲೆ ಯಾವ ಯಾವ ರಾಜಕಾರಣಿಗಳು ಇದ್ದಾರೆ ಎಂದು ಮನ್ಸೂರ್ ಖಾನ್ ಮೊದಲು ಬಂದು ಲಿಸ್ಟ್ ಕೊಡಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಹಾರ ಸಚಿವ  ಜಮೀರ್ ಅಹ್ಮದ್ ಖಾನ್ , ಮಾಧ್ಯಮಗಳ ಮೂಲಕ ಮಾನ್ಸೂರ್ ಖಾನ್ ಗೆ ನಾನು ಹೇಳಿದ್ದೆ. ನಾನು ಈ ಹಿಂದೆ ಸುದ್ದಿಗೋಷ್ಠಿ ಮಾಡಿ ಹೇಳಿದ್ದೆ. ನೀವು ಮೊದಲು ಬನ್ನಿ ಎಂದಿದ್ದೆ. ನಾನು ಮತ್ತೊಮ್ಮೆ ಮನ್ಸೂರ್ ಖಾನ್ ಗೆ ಮನವಿ ಮಾಡುತ್ತೇನೆ. ಯಾವ್ ರಾಜಕಾರಣಿಗಳು ಇದ್ದಾರೆ ಎಂದು ಪಟ್ಟಿ ಕೊಡಲಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದರು.

ಯಾರ್ಯಾರು ತಿಂದಿದ್ದಾರೆ ಗೊತ್ತಾಗಬೇಕು. ನಿನ್ನೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕೆಲವರು ಹೆಸರು ಹೇಳಿದ್ದಾನೆ. ಈ ಬಗ್ಗೆ ಎಸ್ ಐ ಟಿ ತನಿಖೆ ನಡೆಸುತ್ತೆ. ಯಾರು ಅವನ ಬಳಿ ದುಡ್ಡು ತಿಂದಿದ್ದಾನೆ ಅದು ಗೊತ್ತಾಗಬೇಕು. ಅವನು ಹೇಳಿದ ರೀತಿ 1350 ಕೋಟಿ ಹಣ ಇದೆ ಅಂತ ಹೇಳಿದ್ದಾನೆ. ನನಗೆ ಬಂದ ಮಾಹಿತಿ ಪ್ರಕಾರ. ಜನರಿಗೆ ೨೦೦೦ ಕೋಟಿ ಹಣ ನೀಡಬೇಕಾಗಿದೆ. ಮನ್ಸೂರ್ ಖಾನ್ ಗೆ ಪೊಲೀಸರು ರಕ್ಷಣೆ ಕೊಡಲಿದ್ದಾರೆ. ಮನ್ಸೂರ್ ಖಾನ್ ಮೊದಲು ಬಂದು ಲಿಸ್ಟ್ ಕೊಡಲಿ ಎಂದು ಆಗ್ರಹಿಸಿದರು.

ನಮ್ಮ ಸರ್ಕಾರ ಬಡವರು ಪರವಾಗಿದೆ. 50 ಸಾವಿರ ಜನರು ಬಡವರು ಇದ್ದಾರೆ. ಬಡವರಿಗೆ ಹಣ ಕೊಡಿಸಬೇಕಾಗಿರುವುದು ನಮ್ಮ ಜವಾಬ್ದಾರಿ. ವಂಚನೆಗೊಳಗಾದವರಿಗೆ ಹಣ ಕೊಡಸಬೇಕಾದ್ದರಿಂದ ನಾನು ಮನ್ಸೂರ್ ಖಾನ್ ಜತೆ ಿರ್ತೇನೆ ಎಂದರು.

Key words: IMA fraudcase-  Let- Mansur Khan- politicians- list –  Minister Zamir Ahmad Khan