ಮಲೆ ಮಹದೇಶ್ವರ ಬೆಟ್ಟದ ಲಾಡುಗಳ ಮಾರಾಟ ದರ ಏರಿಕೆ 

ಚಾಮರಾಜನಗರ,ನವೆಂಬರ್,09,2020(www.justkannada.in) : ಲಾಡು ತಯಾರಿಕಾ ವೆಚ್ಚ ಏರಿಕೆಯಾದ ಹಿನ್ನೆಲೆಯಲ್ಲಿ  ಇಲ್ಲಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಲಾಡುಗಳ ಮಾರಾಟ ದರದಲ್ಲಿ ಏರಿಕೆ ಮಾಡಲಾಗಿದೆ.kannada-journalist-media-fourth-estate-under-loss100 ಗ್ರಾಂ ತೂಕದ ಲಾಡುಗೆ ಇಂದಿನಿಂದ 25 ರೂಪಾಯಿ ದರ ನಿಗದಿ ಮಾಡಿದ್ದು, ಈ ಹಿಂದೆ 100 ಗ್ರಾಂ  ಲಾಡು ಬೆಲೆ 20 ರೂ. ಇತ್ತು. ಲಾಡು ತಯಾರಿಕಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ 5 ರೂಪಾಯಿ ಏರಿಕೆ ಮಾಡಲಾಗಿದೆ.

ಲಾಡುಗಳ ದರವನ್ನು 2015ರಿಂದಲೂ ಏರಿಕೆ ಮಾಡಿರಲಿಲ್ಲ

ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ತಂದು ಕೊಡುವ ದೇಗುಲಗಳ ಪೈಕಿ ಹನೂರಿನ ಮಲೆ ಮಹದೇಶ್ವರ ಬೆಟ್ಟ ಎರಡನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಮಾದಪ್ಪನ ಸನ್ನಿಧಿಯಲ್ಲಿ ಸಿಗುವ ಲಾಡುಗಳ ದರವನ್ನು 2015ರಿಂದಲೂ ಏರಿಕೆ ಮಾಡಿರಲಿಲ್ಲ ಎಂದರು.

ಕಚ್ಚಾ ವಸ್ತು ಬೆಲೆ ಏರಿಕೆ, ನೌಕರರ ಸಂಬಳ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ತೀರ್ಮಾನ

ಲಾಡು ತಯಾರಿಕೆಯ ಕಚ್ಚಾ ವಸ್ತು ಬೆಲೆ ಏರಿಕೆ, ನೌಕರರ ಸಂಬಳ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ದೇವಸ್ಥಾನದ  ಆಡಳಿತ ಮಂಡಳಿ ಮಾಹಿತಿ ನೀಡಿದೆ.Sales,Malayalees,Hill,Ladies

key words : Sales-Malayalees-Hill-Ladies