ಜಿಲ್ಲೆಯಲ್ಲಿ ಕೋವಿಡ್ -19 ಪರೀಕ್ಷೆ ಉಚಿತ: ಈ ಲಕ್ಷಣಗಳಿದ್ದರೇ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ- ಮೈಸೂರು ಡಿಸಿ ಅಭಿರಾಂ ಜೀ ಶಂಕರ್ ಮನವಿ…

ಮೈಸೂರು,ಜೂ,16,2020(www.justkannada.in): ಕೊರೊನಾ ವಿಚಾರವಾಗಿ ಮೂಗು ಸೋರುವುದು, ತಲೆ ನೋವು, ಗಂಟಲು ನೋವು, ಒಣ ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಈ ಲಕ್ಷಣಗಳಿದ್ದರೆ ಎಲ್ಲರೂ ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ 19, ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಪರೀಕ್ಷೆ ಮಾಡುವ ಆಸ್ಪತ್ರೆಯ ಪಟ್ಟಿಯನ್ನು ಸಹಾ  ನೀಡಲಾಗಿದೆ

ಕೋವಿಡ್ 19 ಪರೀಕ್ಷೆ ಮಾಡುವ ಆಸ್ಪತ್ರೆ ಸಮುದಾಯ ಕೇಂದ್ರಗಳು..

ಕೋವಿಡ್ 19 ಆಸ್ಪತ್ರೆ ‌ಮೇಟಗಳ್ಳಿ

ಕೆ.ಅರ್ ಆಸ್ಪತ್ರೆ ಮೈಸೂರು

ಚೆಲುವಾಂಬ ಆಸ್ಪತ್ರೆ ಮೈಸೂರು

ಟಿ ನರಸೀಪುರ

ನಂಜನಗೂಡು

ಕೆ.ಆರ್ ನಗರ

ಹೆಚ್ ಡಿ ಕೋಟೆ

ಹುಣಸೂರು

ಕೆ ಆರ್ ನಗರ

ಪಿರಿಯಾಪಟ್ಟಣ ತಾಲ್ಲೂಕು ಆಸ್ಪತ್ರೆಗಳು

ಸಮುದಾಯ ಆರೋಗ್ಯ ಕೇಂದ್ರಗಳಾದ ಸಾಲಿಗ್ರಾಮ

ಹುಲ್ಲಹಳ್ಳಿ

ತಗಡೂರು ಕೇಂದ್ರಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. kovid-19-test-free-mysore-dc-abhiram-jee-shankar

ಪರೀಕ್ಷೆಗೆ ಒಳಪಟ್ಟವರು ಕ್ವಾರಂಟೈನ್‌ನಲ್ಲಿ ಇರುವ ಅಗತ್ಯವಿಲ್ಲ ಎಂದು ಡಿಸಿ ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ.

Key words: Kovid-19 -test -free -Mysore DC -Abhiram Jee Shankar