ನಾಳೆ ಆರ್.ಆರ್ ನಗರ ಉಪಚುನಾವಣೆ: ಬಿಗಿ ಭದ್ರತೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕಮಲ್ ಪಂತ್…

ಬೆಂಗಳೂರು, ನವೆಂಬರ್,2,2020(www.justkannada.in):  ನಾಳೆ ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಆರ್.ಆರ್ ನಗರ ಉಪಚುನಾವಣೆಗೆ ಭದ್ರತೆ ವ್ಯವಸ್ಥೆ ಮಾಡಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.jk-logo-justkannada-logo

ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಕ್ಷೇತ್ರದಲ್ಲಿ ಉಪಚುನಾವಣಾ ಮತದಾನ ಶಾಂತಿಯುತವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಆರ್.ಆರ್ ನಗರ ಕ್ಷೇತ್ರದಲ್ಲಿ ಗಲಾಟೆಗಳಾಗುವ  ಮನ್ಸೂಚನೆ ಕಂಡು ಬರುತ್ತದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಭದ್ರತೆಗಾಗಿ  ಕ್ಷೇತ್ರದಲ್ಲಿ ಮೂರು ಮಂದಿ ಡಿಸಿಪಿ, ಐದು ಮಂದಿ ಎಸಿಪಿ, 30 ಇನ್ಸ್ ಪೆಕ್ಟರ್ಸ್, 94 ಮಂದಿ ಎಸ್ ಐ, 1547 ಹೆಡ್ ಕಾನ್ಸ್ ಟೇಬಲ್ , ಕಾನ್ಸ್ ಟೇಬಲ್, 699 ಹೋಗಾರ್ಡ್ಸ್, 20 ಸಿಎಆರ್ ತುಕಡಿ ಸೇರಿ ಒಟ್ಟು 2563 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. 27 ಚೆಕ್ ಪೋಸ್ಟ್ ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ  ಕೆಲವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

Key words: RR nagar-by-election –tomorrow-Police Commissioner -Kamal Pant – tight security- system.