ಸಿಎಂ ಆಗೋಕೆ ಮಾತ್ರ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋಗಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ ಟೀಕೆ.

ಬಳ್ಳಾರಿ,ಜನವರಿ,31,2023(www.justkannada.in): ಜೆಡಿಎಸ್ ಗೆ ಮತ ಹಾಕಿದರೇ ಬಿಜೆಪಿಗೆ ಮತ ಹಾಕಿದ ಹಾಗೆ. ಜೆಡಿಎಸ್ ಗೆ ಮತ ಹಾಕಿದರೇ ಪ್ರಯೋಜವಿಲ್ಲ ಎಂದು ಟೀಕಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಬೆಂಬಲ ನೀಡದಿದ್ದಕ್ಕೆ ನಿಖಿಲ್ ಮತ್ತು ಹೆಚ್.ಡಿ ದೇವೇಗೌಡರು ಸೋತರು. ಸಿದ್ಧರಾಮಯ್ಯರನ್ನ ಡಿಸಿಎಂ ಮಾಡಿದ್ದು ಹೆಚ್.ಡಿ ದೇವೇಗೌಡರು.  ಮುಖ್ಯಮಂತ್ರಿಯಾಗಲು ಮಾತ್ರ ಸಿದ್ದರಾಮಯ್ಯ ಕಾಂಗ್ರೆಸ್ ಹೋಗಿದ್ದಾರೆ ಎಂದು ಕುಟುಕಿದರು.

30 ವರ್ಷದಿಂದ ನಮಗೆ ಕುಟುಂಬ ರಾಜಕಾರಣದ ಲೇಬಲ್ ಕೊಟ್ಟಿದ್ದಾರೆ. ವರುಣಾದಲ್ಲಿ ಪುತ್ರನ ಭವಿಷ್ಯಕ್ಕೆ ಸಿದ್ದರಾಮಯ್ಯ ಹೊರಗೆ ಹೋಗುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗೋಕೆ ಆಗಲ್ಲ ಹಾಗಾಗಿ ಪುತ್ರನ ತರುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಮತ್ತು  ಕೆಎಸ್ ಈಶ್ವರಪ್ಪಗೂ ಅವರ ಮಕ್ಕಳದ್ದೆ ಚಿಂತೆ ಎಂದು ಲೇವಡಿ ಮಾಡಿದರು.

ಅಕ್ರಮ ಗಣಿಗಾರಿಕೆ ಹೊರಬಂದಿದ್ದೇ ಹೆಚ್.ಡಿ ಕುಮಾರಸ್ವಾಮಿಯಿಂದ. ನನ್ನ ವಿರುದ್ದ 150 ಕೋಟಿ  ರೂ. ಆರೋಪ ಮಾಡಿದವರು ಎಲ್ಲಿ ಹೋದರು.? ಜನಾರ್ಧನ ರೆಡ್ಡಿ ಪಕ್ಷದಿಂದ ಜೆಡಿಎಸ್ ಗೆ ತೊಂದರೆಯಾಗಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: Siddaramaiah – Congress –CM-former CM-HD Kumaraswamy