ಚೀನಾದಲ್ಲಿ ಮತ್ತಷ್ಟು ಹೆಚ್ಚಿನ ಕೊರೋನಾ ವೈರಸ್’ಗೆ ಬಲಿಯಾದವರ ಸಂಖ್ಯೆ

ಬೀಜಿಂಗ್, ಮಾರ್ಚ್ 01, 2020 (www.justkannada.in): ಚೀನಾದಲ್ಲಿ ಕೊರೋನಾ ವೈರಸ್ ಹೊಸದಾಗಿ ಮತ್ತೆ 35 ಮಂದಿಯನ್ನು ಬಲಿಪಡೆದುಕೊಂಡಿದೆ.

ಚೀನಾದಲ್ಲಿ ಕೊರೋನಾ ವೈರಸ್ ಗೆ ಮೃತಪಡುತ್ತಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಈಗ 2,870ಕ್ಕೆ ಏರಿಕೆಯಾಗಿದೆ.

ವೈರಾಣು ಸೋಂಕು ಮತ್ತೆ 573 ಮಂದಿಯಲ್ಲಿ ಪತ್ತೆಯಾಗಿದ್ದು, ಚೀನಾದ 31 ಪ್ರಾಂತ್ಯಗಳ ಇತ್ತೀಚಿನ ಮಾಹಿತಿಗಳ ಪ್ರಕಾರ ಸೋಂಕಿತರ ಸಂಖ್ಯೆ 79,824ಕ್ಕೆ ಏರಿಕೆಯಾಗಿದೆ. ಜನವರಿ ಹಾಗೂ ಫೆಬ್ರವರಿ ತಿಂಗಳುಗಳಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ ಎಂದು ವರದಿಗಳು ತಿಳಿಸಿವೆ.