‘ರನ್ ಫಾರ್ ವೈಲ್ಡ್’ ಮೈಸೂರಿನ ಎಟಿಎಂಇ ಕಾಲೇಜಿನಿಂದ ಮ್ಯಾರಥಾನ್

ಮೈಸೂರು, ಮಾರ್ಚ್ 01, 2020 (www.justkannada.in): ನಗರದ ಎಟಿಎಂಇ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಮ್ಯಾರಥಾನ್ ಅಯೋಜಿಸಲಾಗಿತ್ತು.

ರನ್ ಫಾರ್ ವೈಲ್ಡ್ ಘೋಷಣೆಯೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿತ್ತು. ಕಾಡು ಪ್ರಾಣಿಗಳ ಉಳಿಸುವ ಕುರಿತು ಜಾಗೃತಿ ಮೂಡಿಸಲಾಯಿತು. ಮ್ಯಾರಥಾನ್ ಗೆ ರಾಜವಂಶಸ್ಥ ಯದುವೀರ್ ಚಾಲನೆ ನೀಡಿದರು.

ಮ್ಯಾರಥಾನ್ ನಲ್ಲಿ ನೂರಾರು ಯುವಕರು ಭಾಗಿ‌ಯಾಗಿದ್ದರು. ಭಾರತದಲ್ಲಿ ಜೀವ ವೈವಿಧ್ಯತೆಯನ್ನು ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಈಗಿನ ಕಾಲದಲ್ಲಿ ಇದೊಂದು ಸಮಸ್ಯೆ ಯಾಗಿದೆ. ಕಾಡುಗಳ ನಾಶ ಈ ದುಸ್ಥಿತಿಗೆ ಕಾರಣ ಆಗ್ತಾ ಇದೆ. ಈ ಕುರಿತು ಎಚ್ಚೆತ್ತುಕೊಳ್ಳಬೇಕೆಂದು ಯದುವೀರ್ ಹೇಳಿದರು.

ಪ್ರವಾಹ ಹಾಗೂ ತಾಪಮಾನ ಹೆಚ್ಚಾಗಲು ಅರಣ್ಯ ನಾಶವೇ ಕಾರಣ. ಮೈಸೂರು ಭಾಗದಲ್ಲಿರುವ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳಬೇಕು ಎಂದು ರಾಜವಂಶಸ್ಥ ಯದುವೀರ್ ಹೇಳಿದರು.