ಜಲಾಶಯಗಳು ಭರ್ತಿ ಹಿನ್ನೆಲೆ: ಘಟಪ್ರಭಾ ಮತ್ತು ಮಲಪ್ರಭಾ ನದಿಗೆ ನೀರು ಬಿಡುಗಡೆ…

ಬೆಳಗಾವಿ,ಆ,6,2019(www.justkannada.in): ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಈ ಹಿನ್ನೆಲೆ, ಅಧಿಕಾರಿಗಳು  ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 1 ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಟ್ಟಿದ್ದಾರೆ.

ನೀರು ಬಿಟ್ಟಿರುವುದರಿಂದ ತಕ್ಷಣವೇ ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಬೆಳಗಾವಿ ಡಿಸಿ ಬೊಮ್ಮನಹಳ್ಳಿ ಮನವಿ ಮಾಡಿದ್ದಾರೆ. ಘಟಪ್ರಭಾ ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ 20 ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಗೋಕಾಕ ನಗರಕ್ಕೂ ಪ್ರವಾಹ ಭೀತಿ ಕಾಡುತ್ತಿದೆ.

ಇನ್ನೊಂದೆಡೆ ಬೆಳಗಾವಿಯ ನವೀಲು ತೀರ್ಥ (ಮಲಪ್ರಭಾ) ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು ಹೀಗಾಗಿ ಮಲಪ್ರಭಾ ನದಿಗೆ 4 ಕ್ರಸ್ಟ್‌ ಗೇಟ್ ಗಳ ಮೂಲಕ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. 60 ಸಾವಿರ ಕ್ಯೂಸೆಕ್ಸ್ ಒಳಹರಿವು ಹೊಂದಿರುವ ಮಲಪ್ರಭೆಯಿಂದ ಯಾವುದೇ ಕ್ಷಣದಲ್ಲೂ ಹೆಚ್ಚು ನೀರು ಬಿಡುಗಡೆ ಸಾಧ್ಯತೆ ಇದೆ

ಮಲಪ್ರಭಾ ಡ್ಯಾಂ ಒಟ್ಟು 37 ಟಿಎಂಸಿ ಸಾಮರ್ಥ್ಯದ ಹೊಂದಿದ್ದು, ಮಲಪ್ರಭಾ ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮನವಿ ಮಾಡಿದ್ದಾರೆ.

Key words: Reservoirs- fill-  Water- released – Ghataprabha – Malaprabha river