Tuesday, August 4, 2026

BDA Apartments

Home Front Page ಬೆಳ್ಳಂಬೆಳಗ್ಗೆ ಮುಡಾ ಅಧಿಕಾರಿಗಳ ಕಾರ್ಯಾಚರಣೆ: ಅಕ್ರಮವಾಗಿ ನಿರ್ಮಾಣವಾಗಿದ್ದ ದೇವಾಲಯ ತೆರವು.

ಬೆಳ್ಳಂಬೆಳಗ್ಗೆ ಮುಡಾ ಅಧಿಕಾರಿಗಳ ಕಾರ್ಯಾಚರಣೆ: ಅಕ್ರಮವಾಗಿ ನಿರ್ಮಾಣವಾಗಿದ್ದ ದೇವಾಲಯ ತೆರವು.

ಮೈಸೂರು,ಆಗಸ್ಟ್,13,2021(www.justkannada.in): ನಗರದ ಮೇಟಗಳ್ಳಿ ಪೊಲೀಸ್ ಠಾಣೆ ಬಳಿಯ ಪಾರ್ಕ್ ನಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ದೇವಾಲಯವನ್ನು ಮುಡಾ ಅಧಿಕಾರಿಗಳು ತೆರವುಗೊಳಿಸಿ ಜಾಗ ವಶಕ್ಕೆ ಪಡೆದಿದ್ದಾರೆ.

ಬೆಳ್ಳಂಬೆಳಗ್ಗೆ ಮುಡಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಮುಡಾ ಜಾಗದಲ್ಲಿ ಫುಟ್ಬಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ದೇವಾಲಯವನ್ನ ತೆರವುಗೊಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ, ಒತ್ತುವರಿ ತೆರವುಗೊಳಿಸಿ ಜಾಗ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಬಂದೋಬಸ್ತ್ ನಲ್ಲಿ ಮುಡಾ ಸಹಾಯಕ ಆಯುಕ್ತ ಕೃಷ್ಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

Key words: mysore- operation -Muda officers – illegally-Temple -cleared