ಕಾಂಗ್ರೆಸ್ ನದ್ದು ಮರಳು ಮಾಡುವ ಮೋಸದ  ಪ್ರಣಾಳಿಕೆ-  ಸಿಎಂ ಬಸವರಾಜ ಬೊಮ್ಮಾಯಿ ಟೀಕೆ.

ಹುಬ್ಬಳ್ಳಿ,ಮೇ,3,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ನಿನ್ನೆಯಷ್ಟೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ ಮಾಡಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದೊಂದು ಮೋಸದ ಪ್ರಣಾಳಿಕೆ ಜನರನ್ನ ಮರಳು ಮಾಡುವ ಪ್ರಣಾಳಿಕೆ.  ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬರೀ ಸುಳ್ಳೇ ಇದೆ ಪ್ರಣಾಳಿಕೆ ಅನುಷ್ಠಾನಕ್ಕೆ  6 ಲಕ್ಷ ಕೋಟಿ ರೂ.ಬೇಕು ಎಂದರು.

ಹಾಗೆಯೇ ಈಗಾಗಲೇ ಬಿಜೆಪಿ ಜಾರಿಗೆ ತಂದಿರುವ ಯೋಜನೆಗಳನ್ನ ಕಾಂಗ್ರೆಸ್ ಪುನಃ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ.  ಹೆಣ್ಣುಮಕ್ಕಳಿಗೆ ಉಚಿತ ಪಾಸ್ ಅಂತಾರೆ.  ನಾವು ಈಗಾಗಲೇ ಬಜೆಟ್ ನಲ್ಲಿ ಇದನ್ನ ಘೋಷಣೆ ಮಾಡಿದ್ದೇವೆ. ಮೀಸಲಾತಿ  ಶೇ. 75ರಷ್ಟಕ್ಕೆ ಹೆಚ್ಚಳ ಹೇಗೆ ಮಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.

Key words: Congress-fraudulent- manifesto – Criticism -CM Basavaraj Bommai.