ಬಿಎಸ್ ವೈ ಭ್ರಷ್ಟಾಚಾರದ ದಾಖಲೆ ಶೀಘ್ರ ಬಿಡುಗಡೆ: ಸಿಎಂ ಪರ ಬ್ಯಾಟ್ ಬೀಸಿದ ಮಠಾಧೀಶರಿಗೆ ಶಾಸಕ ಯತ್ನಾಳ್ ಟಾಂಗ್.

ಮೈಸೂರು,ಜುಲೈ,6,2021(www.justkannada.in)  ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ಮುಂದುವರೆದಿದ್ದು, ಸಿಎಂ ಬಿಎಸ್ ವೈ ಭ್ರಷ್ಟಾಚಾರ ಕುರಿತ ದಾಖಲೆಯನ್ನ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನ ಬಳಿ ಭ್ರಷ್ಟಾಚಾರ ಸಂಬಂಧ ಬ್ರಹ್ಮಾಸ್ತ್ರವಿದೆ. ಯಡಿಯೂರಪ್ಪ ಭ್ರಷ್ಟಾಚಾರ ಬಯಲು ಮಾಡಿದರೆ. ಅವರ ಪರ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಮಠ ಬಿಟ್ಟು ಓಡ ಬೇಕಾಗುತ್ತದೆ. ಅವರ ಪರ ಬ್ಯಾಟಿಂಗ್ ಮಾಡುವ ಮುನ್ನ ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದರು.

ನಾನು ಕುರುಕ್ಷೇತ್ರದ ಅಭಿಮನ್ಯು ಆಗಲು ಸಿದ್ದ, ಆದರೆ ನಾನು ಅರ್ಜುನನಾಗುತ್ತೇನೆ. ವನವಾಸ, ಅಜ್ಞಾತವಾಸ ಎಲ್ಲಾ ಮುಗಿದಿದೆ.ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಅಷ್ಟೇ. ನನಗೆ ವಿಶ್ವಾಸವಿದೆ ನಾಯಕತ್ವ ಬದಲಾಗುತ್ತದೆ. ನಾನು ಏಕಾಂಗಿ ಅಲ್ಲ ಸಾಕಷ್ಟು ಸಚಿವರು ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತ ಹೋರಾಟ. ಹೋರಾಟ‌ ಮುಂದವರಿಸಲು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಇದರ ಫಲ ಸಿಗುತ್ತದೆ ಎಂದು ಯತ್ನಾಳ್ ತಿಳಿಸಿದರು.

ಯಡಿಯೂರಪ್ಪ ಕುರಿತು ಭ್ರಷ್ಟಾಚಾರದ ದಾಖಲೆ ಶೀಘ್ರದಲ್ಲೇ ಬಿಡುಗಡೆ. ಬಾಯಿ ಮಾತಿನಲ್ಲಿ ಆರೋಪ ಅಂತಾ ಹೇಳಿದ್ದಾರೆ. ಅವರಿಗೆಲ್ಲಾ ದಾಖಲೆ ಮೂಲಕ ಉತ್ತರ ಎಂದು ಯತ್ನಾಳ್ ಸ್ಪಷ್ಟನೆ ನೀಡಿದರು.

ಯಡಿಯೂಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ.

ಯಡಿಯೂಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ. ನಿಮ್ಮ ಭ್ರಷ್ಟಾಚಾರದ ಕರ್ಮಕಾಂಡವೇ ಇದೆ. ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಹಿತದೃಷ್ಟಿಯಿಂದ, ನಿಮ್ಮ ಕುಟುಂಬದ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂದ ಯತ್ನಾಳ್,  ನಾಳೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಕರ್ನಾಟಕಕ್ಕೆ ಒಳ್ಳೆಯದಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

 ಸಚಿವ ಎಸ್.ಟಿ ಸೋಮಶೇಖರ್ ಗೆ ತಿರುಗೇಟು.

ಯಡಿಯೂರಪ್ಪ ವಿರುದ್ಧ ಮಾತಾಡುವವರು ಅವರ ಧೂಳಿಗೆ ಸಮರಿಲ್ಲ  ಎಂಬ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಯತ್ನಾಳ್,  ಸೋಮಶೇಖರ್ ಹೇಳಿರುವುದು ಸತ್ಯ. ನಾವು ಅಂತಾ ಭ್ರಷ್ಟರ ಅಯೋಗ್ಯರ ಧೂಳಾಗಲು ನಾವು ಸಿದ್ದರಿಲ್ಲ. ಸೋಮಶೇಖರ್ ಬೇಕಾದರೆ ಅವರ ಕಾಲಿನ ಧೂಳಾಗಲಿ. ನಾವು ಪವಿತ್ರ ಆತ್ಮ ದೇವರ ಪಾದದ ಧೂಳಾಗುತ್ತೇವೆ. ಅವರೇ ಅವರಿಗೆ ಆದರ್ಶವಾಗಲಿ ನಮಗೆ ಅಂತಾ ನೀಚ ವ್ಯವಸ್ಥೆ ಬೇಕಾಗಿಲ್ಲ ಎಂದು ಕಿಡಿಕಾರಿದರು.

ಸಿಎಂ ಬಿಎಸ್ ವೈಗೆ ತಮ್ಮ ಬಳಿ ಬರುವ ಫೈಲ್‌ ಗೇ ಸಹಿ ಹಾಕಲು ಶಕ್ತಿಯಿಲ್ಲ.

ಮತ್ತೆ ಸಿಎಂ ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಕಿಡಿಕಾರಿದ ಯತ್ನಾಳ್, ಪ್ರಧಾನಿ ಮೋದಿ ಉದಾಹರಣೆ ನೀಡಿ ವಾಗ್ದಾಳಿ ನಡೆಸಿದರು.

ಸಿಎಂ ಯಡಿಯೂರಪ್ಪಗೆ ತಮ್ಮ ಬಳಿ ಬರುವ ಫೈಲ್‌ ಗೇ ಸಹಿ ಹಾಕಲು ಶಕ್ತಿಯಿಲ್ಲ. ಪ್ರಧಾನಿ ನಾಲ್ಕು ತಾಸು ಮಾತ್ರ ಮಲಗುತ್ತಾರೆ. ಸಿಎಂ ಮಗನ ಒತ್ತಾಯಕ್ಕೆ ಮಣಿದು ವಿಧಾನಸೌಧಕ್ಕೆ ಹೋಗುತ್ತಾರೆ. ಸಭೆಗಳು ಕೇವಲ 15 ನಿಮಿಷ ಮಾತ್ರ ನಡೆಯುತ್ತದೆ. ಕೊರೊನಾ ಸಭೆ, ಸಚಿವ ಸಂಪುಟದ  ಸಭೆ ಎಲ್ಲವೂ ಅಷ್ಟೇ. 30 ರಿಂದ 40 ವಿಷಯ ಇದ್ದರು 30 ನಿಮಿಷದಲ್ಲಿ ಮುಗಿಯುತ್ತದೆ. ಸಿಎಂ ಯಡಿಯೂರಪ್ಪ ನಿಷ್ಕ್ರಿಯರಾಗಿದ್ದಾರೆ, ಅವರ ಮಗ ಆಡಳಿತ ನಡೆಸುತ್ತಿದ್ದಾನೆ. ನ್ಯಾಯಾಂಗದ ತೀರ್ಪಿನ ಮೇಲೆ ಪ್ರಭಾವ ಬೀರಲು ಯತ್ನಸಿದ್ದಾರೆ. ಎಲ್ಲರನೂ ಖರೀದಿ ಮಾಡುತ್ತೇವೆ ಅನ್ನೋ ಭಾವನೆ ಇದೆ. ನ್ಯಾಯಾಂಗವನ್ನು ಖರೀದಿ ಮಾಡುತ್ತೇನೆ ಅನ್ನೋ ಮೂರ್ಖತನದಲ್ಲಿ ಇದ್ದಾರೆ. ಆದರೆ ರಾಜ್ಯ ದೇಶದ ನ್ಯಾಯಾಂಗ ವ್ಯವಸ್ಥೆ ಇಂತಹ ಆಸೆ ಆಮಿಷಗಳಿಗೆ ಒಳಗಾಗುವುದಿಲ್ಲ. ಐತಿಹಾಸಕ ಕರ್ನಾಟಕವನ್ನು ಭ್ರಷ್ಟಾಚಾರಿಗಳಿಂದ ಮುಕ್ತ ಮಾಡುವ ತೀರ್ಪು ನೀಡುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.

ನಾನೇ ಹಿಂದೆನೇ ಮುಖ್ಯಮಂತ್ರಿಯಾಗಬೇಕಿತ್ತು.

ನಾನೇ ಹಿಂದೆನೇ ಮುಖ್ಯಮಂತ್ರಿಯಾಗಬೇಕಿತ್ತು. ನಾನೇ ಕೆಲ ಅವಕಾಶಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಸದಾನಂದಗೌಡ ಜಗದೀಶ್ ಶೆಟ್ಟರ್‌ಗಿಂತ ನಾನು ಸೀನಿಯರ್. ಯಡಿಯೂರಪ್ಪ ಮಂತ್ರಿನೂ ಆಗಿರಲಿಲ್ಲ ಆಗಲೇ ನಾನೇ ಕೇಂದ್ರ ಮಂತ್ರಿಯಾಗಿದ್ದೆ  ರಾಜಕೀಯ ಅಂತ್ಯವಾದರೂ ಪರವಾಗಿಲ್ಲ. ಭ್ರಷ್ಟಾಚಾರ ಕುಟುಂಬಶಾಯಿ ವಿರುದ್ದ ನನ್ನ ಹೋರಾಟ ನಿಲ್ಲಿಸಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ENGLISH SUMMARY….

Documents related to BSY’s corruption charges will be released soon: MLA Yatnal
Mysuru, July 6, 2021 (www.justkannada.in): BJP MLA Basanagouda Patil Yatnal has continued his charges against Chief Minister B.S. Yedyurappa. He has said that he would soon release the document related to the corruption charges involving Chief Minister B.S. Yedyurappa.
Speaking in Mysuru today he informed that he owns evidence against the Chief Minister. “If I release that evidence all the heads of the Maths who are supporting him will have to keep quiet. Hence, I request all of them to be careful before support B.S. Yedyurappa,” he said.
“Many of them are saying that the evidence that I have relating to corruption charges against the Chief Minister is just on words. I am ready to reply to them by producing the documents,” he added.
Further speaking on the occasion he opined that the Chief Minister B.S. Yedyurappa should step down respectfully, as it is good for himself and also for his family. “The Union Cabinet expansion will take place tomorrow, we are expecting that Karnataka will get good news,” he said.
Keywords: BJP MLA/ Basanagouda Patil Yatnal/ Chief Minister B.S. Yedyurappa/ corruption charges/ documents/ evidence

Key words: Release – BS Yeddyurappa- Corruption –Record- MLA –basanagouda patil Yatnal-mysore