Saturday, September 19, 2026

BDA Apartments

ಅನಿಲ್ ಕುಂಬ್ಳೆ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಭೇಟಿ ಮಾಡಿದ್ದೇಕೆ?! BDA JK_Adv BDA Adv
Home Front Page ಅನಿಲ್ ಕುಂಬ್ಳೆ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಭೇಟಿ ಮಾಡಿದ್ದೇಕೆ?!

ಅನಿಲ್ ಕುಂಬ್ಳೆ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಭೇಟಿ ಮಾಡಿದ್ದೇಕೆ?!

ಬೆಂಗಳೂರು, ಜುಲೈ 06, 2021 (www.justkannada.in): ಕ್ರಿಕೆಟಿಗ ಅನಿಲ್ ಕುಂಬ್ಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ.

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ ಕಮಿಟಿಯ ಮುಖ್ಯಸ್ಥರಾಗಿರುವ ಅನಿಲ್ ಕುಂಬ್ಳೆ, ಜಗನ್ ಮೋಹನ್ ರೆಡ್ಡಿಯವರನ್ನು ಔಪಚಾರಿಕವಾಗಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.

50ರ ಹರೆಯದ ಅನಿಲ್ ಕುಂಬ್ಳೆ ಭಾರತ ಟೆಸ್ಟ್‌ ತಂಡದ ನಾಯಕರಾಗಿದ್ದವರು. ಬಲಗೈ ಸ್ಪಿನ್ನರ್ ಆಗಿರುವ ಕುಂಬ್ಳೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 600+ ವಿಕೆಟ್‌ ದಾಖಲೆ ಹೊಂದಿದ್ದಾರೆ.

ಮುಖ್ಯಮಂತ್ರಿಯ ಕ್ಯಾಂಪ್‌ ಆಫೀಸ್‌ನಲ್ಲಿ ಕುಂಬ್ಳೆ ಅವರು ರೆಡ್ಡಿಯವರನ್ನು ಭೇಟಿಯಾಗಿದ್ದಾರೆ.