ಮುಂದಿನ ತಿಂಗಳು ಐಪಿಎಲ್ ಆಟಗಾರರ ಬಿಡ್ಡಿಂಗ್

ಬೆಂಗಳೂರು, ಜುಲೈ 06, 2021 (www.justkannada.in): ಮುಂದಿನ ಐಪಿಎಲ್ ನಲ್ಲಿ ಮತ್ತೆರಡು ತಂಡಗಳು ಸೇರ್ಪಡೆಯಾಗಲಿದ್ದು, ಆಗಸ್ಟ್ ವೇಳೆಗೆ ಬಿಸಿಸಿಐ ಟೆಂಡರ್ ನಿಗದಿ ಪಡಿಸಲಿದೆ.

ಆಗಸ್ಟ್ ನಲ್ಲಿ ಬಿಸಿಸಿಐ ಎರಡು ಹೊಸ ತಂಡಗಳಿಗೆ ಟೆಂಡರ್ ನಡೆಸಲಿದೆ. ಅಕ್ಟೋಬರ್ ವೇಳೆಗೆ ಎರಡು ಹೊಸ ತಂಡಗಳು ಸಿದ್ಧವಾಗಲಿವೆ.

ಗೋಯೆಂಕಾ ಗ್ರೂಪ್ ಮತ್ತು ಅದಾನಿ ಗ್ರೂಪ್ ಐಪಿಎಲ್ ತಂಡಗಳನ್ನು ಖರೀದಿಸಲು ಸ್ಪರ್ಧೆಯಲ್ಲಿದೆ. ಸ್ಪರ್ಧೆಯಲ್ಲಿ ಅಹಮದಾಬಾದ್ ಮತ್ತು ಲಕ್ನೋ ಫ್ರಾಂಚೈಸಿಗಳು ಮುಂದಿವೆ.

ಡಿಸೆಂಬರ್‌ನಲ್ಲಿ ಬಿಸಿಸಿಐ, ಐಪಿಎಲ್‌ ಹರಾಜು ನಡೆಸಲಿದೆ. ಹೊಸದಾಗಿ ಆಟಗಾರರ ಹರಾಜು ನಡೆಯಲಿದೆ. ಎಲ್ಲಾ ತಂಡಗಳು 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲಿದ್ದಾರೆ.