ಟೋಕಿಯೋ ಒಲಿಂಪಿಕ್ಸ್: ಮೇರಿ ಕೋಮ್-ಮನ್’ಪ್ರೀತ್ ಸಿಂಗ್ ಧ್ವಜದ ಗೌರವ

ಬೆಂಗಳೂರು, ಜುಲೈ 06, 2021 (www.justkannada.in): ಮೇರಿ ಕೋಮ್ ಮತ್ತು ಮನ್‌ಪ್ರೀತ್‌ ಸಿಂಗ್‌ ಟೋಕಿಯೋ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಧ್ವಜ ಹಿಡಿದು ಸಾಗಲಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿರುವ ರಸ್ಲರ್ ಭಜರಂಗ್ ಪೂನಿಯಾ ಒಲಂಪಿಕ್ಸ್ ಮುಕ್ತಾಯ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿಯಲಿದ್ದಾರೆ.

ಜುಲೈ 23ರಿಂದ ಆಗಸ್ಟ್ 8ರ ವರೆಗೆ ಜಪಾನ್‌ನ ಟೋಕಿಯೋದಲ್ಲಿ ಈ ವರ್ಷದ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಈ ವಿಚಾರವನ್ನು ತಿಳಿಸಿದೆ.

ವಿಶ್ವ ಖ್ಯಾತಿಯ ಈ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದಿಂದ 126 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ತಂಡದ ಜೊತೆಗೆ 75 ಮಂದಿ ಅಧಿಕಾರಿಗಳೂ ಇರಲಿದ್ದಾರೆ.