ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಹೊಸ ಮೈಲಿಗಲ್ಲು ತಲುಪಿದ ಆ್ಯಂಡರ್ಸನ್

ಬೆಂಗಳೂರು, ಜುಲೈ 06, 2021 (www.justkannada.in): ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳ ವಿಶಿಷ್ಠ ದಾಖಲೆಯನ್ನು ಆ್ಯಂಡರ್ಸನ್ ನಿರ್ಮಿಸಿದ್ದಾರೆ.

ಹೌದು. ಇಂಗ್ಲೆಂಡ್ ವೇಗಿ ಜೇಮ್ಸ್ ಆಯಂಡರ್ಸನ್ ತನ್ನ ವೃತ್ತಿ ಜೀವನದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಲ್ಯಾನ್ಸೆಶೈರ್ ಪರ ಆಡಿದ್ದ ಆ್ಯಂಡರ್ಸನ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್ ಪಡೆದ 14ನೇ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ವೇಗಿಗಳಾದ ಆಂಡಿ ಕ್ಯಾಡಿಕ್ (2005), ಮಾರ್ಟಿನ್ ಬಿಕ್ನೆಲ್ (2004), ಡೆವೊನ್ ಮಾಲ್ಕಮ್ (2002) ಮತ್ತು ವಾಸಿಮ್ ಅಕ್ರಮ್ (2001) ಈ ಸಾಧನೆ ಮಾಡಿದ್ದರು.