ಮೈಸೂರಿನಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ.

ಮೈಸೂರು,ಜುಲೈ,29,2021(www.justkannada.in):  ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.jk

ಮೈಸೂರು ನಗರದ ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಯ್ಯದ್ ಮಹಾಸ್ ಹಾಗೂ ಆಸಿಫ್ ಪಾಶ ಬಂದಿತ ಆರೊಪಿಗಳು. ಆರೋಪಿಗಳು 22 ರಿಂದ 27 ವರ್ಷದವರಾಗಿದ್ದು ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಬಂಧಿತರು ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದಾರೆ. ಸ್ಕೂಟರ್ ನಲ್ಲಿ ಬಂದು ಆರೋಪಿಗಳು ಕೈಗಾರಿಕ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾರುತ್ತಿದ್ದರು.

ಬಂಧಿತರಿಂದ 1,00,000 ಬೆಲೆ ಬಾಳುವ 4 ಕೆಜಿ 195 ಗ್ರಾಮ್ ತೂಕದ ಗಾಂಜಾ ಹಾಗೂ ಒಂದು ಟಿ.ವಿ.ಎಸ್ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.

Key words: Arrest – two persons- selling- marijuana – Mysore