ಪಾಕ್ ಪರ ಘೋಷಣೆ  ಕೇಸ್: ಕೋರ್ಟ್ ಆವರಣದಲ್ಲೇ ಮೂವರು ಆರೋಪಿಗಳಿಗೆ ಥಳಿಸಿ ಚಪ್ಪಲಿ ಎಸೆದ ಸಾರ್ವಜನಿಕರು…

ಹುಬ್ಬಳ್ಳಿ, ಫೆ.17,2020(www.justkannada.in):  ‘ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧಿತರಾಗಿರುವ ಮೂವರು ಆರೋಪಿಗಳಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ನಡುವೆ ಮೂವರು ಆರೋಪಿಗಳಿಗೆ ಕೋರ್ಟ್ ಅವರಣದಲ್ಲೇ ಸಾರ್ವಜನಿಕರು ಥಳಿಸಿ ಚಪ್ಪಲಿ ಏಟು ಕೊಟ್ಟಿರುವ ಘಟನೆ ನಡೆದಿದೆ.

ಪಾಕ್ ಪರ ಘೋಷಣೆ ಕೂಗಿದ್ದ ಮೂವರು ಆರೋಪಿಗಳಾದ ಅಮೀರ್, ಬಾಸಿತ್, ತಾಲಿಬ್  ನನ್ನ ಇಂದು ಪೊಲೀಸರು ಹುಬ್ಬಳ್ಳಿ 3ನೇ ಜೆಎಂಎಫ್ ಜಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಕೋರ್ಟ್ ಮೂವರು ಆರೋಪಿಗಳಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳನ್ನು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ಅಲ್ಲಿ ಸೇರಿದ್ದ ಗುಂಪು ನ್ಯಾಯಾಲಯದ ಆವರಣದಲ್ಲೇ  ಮೂವರು ಅರೋಪಿಗಳಿಗೆ ಥಳಿಸಲು ಮುಂದಾದರು. ಜತೆಗೆ ಆರೋಪಿಗಳ ಮೇಲೆ, ಕಲ್ಲು, ಶೂ, ಚಪ್ಪಲಿ ತೂರಾಟ ನಡೆಸಿದ್ದಾರೆ. ಅಲ್ಲದೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಳಿಕ ಪೊಲೀಸರು ಅವರನ್ನು ಎಳೆದೊಯ್ದು ಪೊಲೀಸ್ ಜೀಪಿನಲ್ಲಿ ಕರೆದೊಯ್ದರು.

Key words: Pro-Pak -Proclamation Case- accused – thrown – slippers – court