ಚಾಮರಾಜನಗರ ಆಕ್ಸಿಜನ್ ದುರಂತ: ಸರ್ಕಾರದ ನಿರ್ಧಾರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್…

ಮೈಸೂರು,ಮೇ,5,2021(www.justkannada.in): ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸರ್ಕಾರದ ನಿರ್ಧಾರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.jk

ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, ಇದು ಬಹಳ ದುರದೃಷ್ಟಕರವಾದ ವಿಷಯ. ಚಾಮರಾಜನಗರದ ಡಿಸಿ ಯಾರೋ ಹುಡುಗರನ್ನ ಇರಿಸಿಕೊಂಡು ಕೂಗಿಸಿದ್ದಾರೆ. ಮೈಸೂರು ಜಿಲ್ಲೆ ಮೇಲೆ ಅಪಾದನೆ ಮಾಡಿಸಿದ್ದಾರೆ. ನಾನು ಕೂಡ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ದೇನೆ. ಇದನ್ನ ಸ್ವತಃ ನ್ಯಾಯಾಲಯವೇ  ತನಿಖೆಗೆ ಸೂಚಿಸಿದೆ. ಚಾಮರಾಜನಗರದ ಈ ಆರೋಪದಿಂದ ಮೈಸೂರು ಹೊರ ಬರಲಿದೆ ಎಂದಿದ್ದಾರೆ. Chamarajanagar -Oxygen –Disaster-MLC- H. Vishwanath

ಐಎಎಸ್ ಆಫೀಸರ್‌ನಿಂದ ನ್ಯಾಯ ಸಿಗಲ್ಲ. ಆ ಅಧಿಕಾರಿ ಸರ್ಕಾರದ ಒಂದು ಭಾಗವಾಗಿದ್ದಾರೆ. ಹಾಗಾಗಿ ಅವರಿಂದ ನ್ಯಾಯ ಸಿಗೋಲ್ಲ. ಅವರು ಬಂದರೂ ಸಹ ಮೂರೇ ಆಕ್ಸಿಜನ್ ಸಾವು ಅಂತಾರೆ ಎನ್ನುವ ಮೂಲಕ ಸರ್ಕಾರದ ನಿರ್ಧಾರದ ಬಗ್ಗೆಯೇ ಹೆಚ್. ವಿಶ್ವನಾಥ್ ಅನುಮಾನ ವ್ಯಕ್ತಪಡಿಸಿದರು.

Key words: Chamarajanagar -Oxygen –Disaster-MLC- H. Vishwanath