ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು…?

ಮಡಿಕೇರಿ, ಮಾರ್ಚ್ 19, 2022 (www.justkannada.in): ರಾಜ್ಯದ ಶಾಲೆಗಳ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತಂತೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ. ಭಗವದ್ಗೀತೆಯಲ್ಲಿ ಜೀವನದ ಪಾಠ ಇದೆ. ನೈತಿಕತೆ ಇದೆ. ಅದು ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಬೋಧಿಸುತ್ತದೆ ಎಂದಿದ್ದಾರೆ.

ಬೇರೆ ಧರ್ಮಗ್ರಂಥಗಳಂತೆ ಭಗವದ್ಗೀತೆಯನ್ನು ಭಾವಿಸಬೇಡಿ. ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅವಳಡಿಸಲೇಬೇಕು. ಈ ಮೂಲಕ ಮಕ್ಕಳು ಶಾಲೆಯಲ್ಲಿಯೇ ಭಗವದ್ಗೀತೆ ಅಧ್ಯಯನ ಮಾಡುವಂತಾಗಬೇಕು ಎಂದು ಹೇಳಿದ್ದಾರೆ.