100 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ಅಪ್ಪು ‘ಜೇಮ್ಸ್’ !

ಮೈಸೂರು, ಮಾರ್ಚ್ 19, 2022 (www.justkannada.in): ಜೇಮ್ಸ್ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಕುತೂಹಲ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿದೆ.

ಸಿನಿಮಾ ಕಲೆಕ್ಷನ್ ಕುರಿತು ‘ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಥಿಯೇಟರ್ ಕಲೆಕ್ಷನ್, ಸಿನಿಮಾ ಹಕ್ಕು ಸೇರಿ ‘ಜೇಮ್ಸ್​’ ಚಿತ್ರ 100 ಕೋಟಿ ರೂ. ಗಳಿಸಿದೆ ಎಂಬ ವಿಷಯವನ್ನು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಒಪ್ಪಿಕೊಂಡಿದ್ದಾರೆ.

‘ಜೇಮ್ಸ್’ ಚಿತ್ರಕ್ಕೆ ಒಟಿಟಿ ಹಾಗೂ ಟಿವಿಯಲ್ಲೂ ಬೇಡಿಕೆ ಇದೆ. ಈ ಕಾರಣಕ್ಕೆ ಚಿತ್ರಕ್ಕೆ ದೊಡ್ಡ ಬೇಡಿಕೆ ಬಂದಿದೆ. ಎಲ್ಲಾ ಸೇರಿ ಸಿನಿಮಾ ಉತ್ತಮ ಕಲೆಕ್ಷನ್​ ಮಾಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ.