ಕರಗ ಮಹೋತ್ಸವದ ವೇಳೆ ಬೆಂಕಿ ಅನಾಹುತ: ಹೊತ್ತಿ ಉರಿದ 10 ಬೈಕ್ ಗಳು.

ಬೆಂಗಳೂರು,ಏಪ್ರಿಲ್,6,2023(www.justkannada.in):  ಕರಗ ಮಹೋತ್ಸವದ ವೇಳೆ ದೇವಸ್ಥಾನದ ಮುಂದೆ ಹಚ್ಚಲಾಗಿದ್ದ ಕರ್ಪೂರದ ಬೆಂಕಿ ತಗುಲಿ ದ್ವಿಚಕ್ರವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ದೇವಸ್ಥಾನದ ಮುಂದೆ ಕರ್ಪೂರ ಹಚ್ಚಲಾಗಿತ್ತು. ಈ ವೇಳೆ ಕರ್ಪೂರದ ಬೆಂಕಿ ತಗುಲಿ ದೇವಸ್ಥಾನದ ಮುಂದೆ ನಿಲ್ಲಿಸಿದ  10 ಬೈಕ್ ಗಳು ಹೊತ್ತಿ ಉರಿದಿವೆ. . ವಾಹನಗಳನ್ನು ತೆರವುಗೊಳಿಸುವಂತೆ ಮೈಕ್ ನಲ್ಲಿ ಅನೌನ್ಸ್ ಮಾಡಿದರೂ ಭಕ್ತರು ವಾಹನಗಳನ್ನು ತೆರವುಗೊಳಿಸಿಲ್ಲ. ಇದರಿಂದಾಗಿ ಬೆಂಕಿ ಸುತ್ತಮುತ್ತಲೂ ವ್ಯಾಪಿಸಿದೆ ಎನ್ನಲಾಗಿದೆ.

ದೇವಸ್ಥಾನದ ಮುಂದೆ ನಿಲ್ಲಿಸಿದ್ದ 10ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.

Key words: Fire – Karaga Mahotsava-10 bikes- burnt.