ಕೋವಿಡ್ ಆತಂಕ: ಟೋಕಿಯೊ ಒಲಂಪಿಕ್ ಆಯೋಜನೆಗೆ ವಿರೋಧ

ಬೆಂಗಳೂರು, ಮೇ 27, 2021 (www.justkannada.in): ಟೋಕಿಯೊದಲ್ಲಿ (ಟೋಕಿಯೊ) ಒಲಂಪಿಕ್ ಕ್ರೀಡಾಕೂಟವನ್ನು ನಡೆಸಲು ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು ಜಪಾನಿಗರು ಕ್ಯಾಂಪೇನ್ ಆರಂಭಿಸಲು ನಿರ್ಧರಿಸಿದ್ದಾರೆ.

ಕೋವಿಡ್ ಹೆಚ್ಚುತ್ತಿರುವ ಕಾರಣ ಈ ಆಟಗಳಲ್ಲಿ ಬಿಕ್ಕಟ್ಟು ಇದೆ. ಜಪಾನ್‌ನ ಅನೇಕ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಒಲಂಪಿಕ್ ಆಯೋಜನೆ ಬೇಡ ಎಂಬ ವಾದ ದೇಶವಾಸಿಗಳಿಂದ ವ್ಯಕ್ತವಾಗುತ್ತಿದೆ.

ಜಪಾನಿನ ಪ್ರಮುಖ ಪತ್ರಿಕೆ ಅಸಾಹಿ ಶಿಂಬುನ್ ಟೋಕಿಯೊ ಒಲಿಂಪಿಕ್ಸ್ ಅನ್ನು ರದ್ದುಗೊಳಿಸುವಂತೆ ಬುಧವಾರ ಮನವಿ ಮಾಡಿದೆ.

ಒಲಿಂಪಿಕ್ ರದ್ದುಗೊಳಿಸಲು ಪ್ರಧಾನ ಮಂತ್ರಿ ನಿರ್ಧರಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಪತ್ರಿಕೆ ಆಗ್ರಹಿಸಿದೆ.