Wednesday, September 16, 2026

BDA Apartments

ಮರಾಠ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು – ಬಿಜೆಪಿ ಶಾಸಕ ಆಗ್ರಹ...
Home Front Page ಮರಾಠ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು – ಬಿಜೆಪಿ ಶಾಸಕ ಆಗ್ರಹ.

ಮರಾಠ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು – ಬಿಜೆಪಿ ಶಾಸಕ ಆಗ್ರಹ.

ಬೆಳಗಾವಿ, ಮಾರ್ಚ್,28,2022(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿದ್ದು ಈ ನಡುವೆ ಸಚಿವ ಸಂಪುಟ ವಿಸ್ತರಣೆಗೆ ಆಗ್ರಹ ಕೇಳಿ ಬರುತ್ತಿದ್ದು,  ಮಂತ್ರಿಗಿರಿ ಪಡೆಯಲು ಹಲವು ಶಾಸಕರುಗಳು ಸಿಎಂ ಮತ್ತು ಹೈಕಮಾಂಡ್ ಮೇಲೆ ಒತ್ತಡ ಹಾಕಲು ಸಜ್ಜಾಗಿದ್ದಾರೆ. ಈ ಮಧ್ಯೆ ಶಾಸಕ ಅನಿಲ್ ಬೆನಕೆ ಸಹ ತಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಅನಿಲ್ ಬೆನಕೆ, ಮರಾಠ ಸಮುದಾಯಕ್ಕೆ  ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು.  ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಆದರೆ ಸಚಿವ ಸ್ಥಾನಕ್ಕೆ  ಹೋರಾಟ ಮಾಡಲ್ಲ ಎಂದು ಹೇಳಿಕೆ ನೀಡಿದ್ದಾರೆ.ಮರಾಠ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು anil

ಇದೇ ವೇಳೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅನಿಲ್ ಬೆನಕೆ, ಸಿದ್ಧರಾಮಯ್ಯ ಹಿಂದೂ ವಿರೋಧಿ.  ಭಗವಾ ಪೇಟ ತಲೆಗೆ ಕಟ್ಟಲು ಹೋದರೆ ಕಿತ್ತೆಸೆಯುತ್ತಾರೆ.  ಹಿಂದೂ ಬೇರೆ, ಅಲ್ಪಸಂಖ್ಯಾತರು ಬೇರೆ ಎಂದು ಸಿದ‍್ಧರಾಮಯ್ಯ ದ್ರುವೀಕರಣ ಮಾಡುತ್ತಾರೆ ಎಂದು ಕಿಡಿಕಾರಿದರು.

Key words: minister – position – Maratha community- MLA