ಟಿಹೆಚ್ಒ ಆತ್ಮಹತ್ಯೆ ಪ್ರಕರಣ: ಫಾನಾ ಸದಸ್ಯರಿಂದ ಅ. 23 ರಂದು  ಕ್ಯಾಂಡಲ್ ‌ಲೈಟ್ ಪ್ರತಿಭಟನೆ..

ಬೆಂಗಳೂರು,ಆ,21,2020(www.justkannada.in):ವೈದ್ಯಕೀಯ ಬ್ರಾತೃತ್ವದ  ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ಡಾ. ನಾಗೇಂದ್ರ,ನಂಜನಗೂಡು ಅವರ ಅಗಲಿದ ಆತ್ಮಕ್ಕಾಗಿ ಪ್ರಾರ್ಥಿಸಿ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ )-ಕೆಎಸ್‌ಬಿ ನೀಡಿದ ಕರೆಗೆ ಬೆಂಬಲವಾಗಿ ಎಲ್ಲಾ ಫಾನಾ ಸದಸ್ಯರು ಆಗಸ್ಟ್ 23 ರ ಭಾನುವಾರ ರಾತ್ರಿ 8.00 ಕ್ಕೆ, ಕ್ಯಾಂಡಲ್‌ಲೈಟ್ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.tho-suicide-case-fana-members-candlelight-protest-aug-23rd

ಸಮಾಜದ ಯೋಗಕ್ಷೇಮಕ್ಕಾಗಿ ಹಾಗೂ ಕೊರೋನಾ ಹೆಮ್ಮಾರಿಗೆ ತುತ್ತಾಗಿ  ಪ್ರಾಣ ತ್ಯಾಗ ಮಾಡಿದ ಹೆಲ್ತ್‌ಕೇರ್ ಸಿಬ್ಬಂದಿ ಮತ್ತು ಕೋವಿಡ್ ಯೋಧರ  ಸ್ಮರಣಾರ್ಥ  ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ )-ಕೆಎಸ್‌ಬಿ ನೀಡಿದ ಕರೆಗೆ ಬೆಂಬಲವಾಗಿ  ಎಲ್ಲಾ ಫಾನಾ (ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್  ಸಂಘ)ದ  ಸದಸ್ಯರು, ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಆಗಸ್ಟ್  21 ಮತ್ತು  22 ರಂದು ನಾವೆಲ್ಲರೂ  ಕಪ್ಪು ಬ್ಯಾಡ್ಜ್ / ರಿಬ್ಬನ್ ಧರಿಸಿ  ಆಗಸ್ಟ್ 23 ರ ಭಾನುವಾರ ರಾತ್ರಿ 8.00 ಕ್ಕೆ, ಕ್ಯಾಂಡಲ್‌ ಲೈಟ್ ಪ್ರತಿಭಟನೆಯನ್ನ ಆಯೋಜಿಸಿದೆ.tho-suicide-case-fana-members-candlelight-protest-aug-23rd

ಆರೋಗ್ಯ ಸಿಬ್ಬಂದಿಯ ಸಮಸ್ಯೆಗಳು ಮತ್ತು ಒತ್ತಡಗಳಿಗೆ  ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಮತ್ತು ಅಧಿಕಾರಶಾಹಿ ಆಡಳಿತವನ್ನು ಫಾನಾ (ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್  ಸಂಘ) ಖಂಡಿಸುವುದಾಗಿ ತಿಳಿಸಿದೆ.

key words: THO -suicide case- FANA -members -Candlelight -protest -aug 23rd.